ankita janakiramana
ರಾಗ: ಮಧ್ಯಮಾವತಿ ತಾಳ: ಅಟ
ಮಂಗಳಂ ಮಂಗಳಂ ಗುರುರಾಜರಿಗೆ ಮಂಗಳಂ ಮಂಗಳಂ ಪ
ಮಂಗಳಂ ಕರುಣಾನಿಧಿಗೆ ಮಂಗಳಂ ಅ. ಪ
ವರತುಂಗತೀರದ ಪುರಮಂತ್ರಾಲಯ
ಕ್ಷೇತ್ರದಿ ನೆಲೆಸಿಹ ಪ್ರಹ್ಲಾದರಿಗೆ 1
ದೀನಭಕುತರ ನಿರುತದಿ ಸಲಹುವ
ಘನಬಿರುದುಪೊತ್ತ ಶ್ರೀವ್ಯಾಸತೀರ್ಥರಿಗೆ 2
ಜಾನಕಿರಮಣನ ಶ್ರೀಮೂಲರಾಮರಪಾದ-
ಧ್ಯಾನಾರಾಧಕ ಶ್ರೀರಾಘವೇಂದ್ರರಿಗೆ 3
***