Showing posts with label ಶ್ರೀನಿವಾಸನಿಮೇಷ ಮುನಿಶುಭನಾಗಪ್ರಿಯ prasannavenkata. Show all posts
Showing posts with label ಶ್ರೀನಿವಾಸನಿಮೇಷ ಮುನಿಶುಭನಾಗಪ್ರಿಯ prasannavenkata. Show all posts

Monday, 18 November 2019

ಶ್ರೀನಿವಾಸನಿಮೇಷ ಮುನಿಶುಭನಾಗಪ್ರಿಯ ankita prasannavenkata

by ಪ್ರಸನ್ನವೆಂಕಟದಾಸರು
ಶ್ರೀನಿವಾಸನಿಮೇಷ ಮುನಿಶುಭನಾಗಪ್ರಿಯ ಹರೆದೀನನಾಥ ನೀ ಎನ್ನ ಪಾಲಿಸೊ ಪ್ರಾಣಪತಿಬಿಡದೆ ದೇವ ಪ.

ಭೂರಿದುರಿತವು ಬೆನ್ನಬಿಡದಿರಲಾರಿಗುಸುರುವೆನೊಘೋರಭವಬವಣೆಯ ಅನುಭವವಾರಿಗೊಪ್ಪಿಪೆನೊಮೀರಿ ದಹಿಸುವ ಮೂರುತಾಪದದಾರುಕ್ಕುರೇನೊಸಾರಸೇವಕಮಾನಿ ನರಹರಿ ಸಾರಿದೆನೊ ನಿನ್ನ ದೇವ 1

ಪೋಕಮನುಜರ ಅನುಸರಣಿಗಳಿಂದಾಕಾನನಗೆಲುವುಸಾಕು ಸಾಕಲ್ಪರ ಸಖತ್ವವು ಸೇವೆಗತ ಸುಖವುಯಾಕಿನಿತು ಕ್ಲೇಶವು ನನಗೆ ನೀ ಸಾಕು ನೂಕುಳುಹುಶ್ರೀ ಕಮಲಲೋಚನ ಕರುಣಿ ನಿನ್ನ ಬೇಕು ಊಳಿಗವು ದೇವ 2

ನೀಚ ಸಂಗವನೊಲ್ಲೆ ಬಲುದುರ್ವಾಚ್ಯದಲಿ ನೊಂದೆನಾಚಿಕಿಲ್ಲದೆ ವಿಷಯದಲಿ ಸಂಕೋಚ ನಡೆ ತಂದೆಸೂಚಿಸಿನ್ನಾದರೆ ತವಾಂಘ್ರಿ ಗುಣಾಚರಣೆಯಿಂದಯಾಚಕರೊಡೆಯ ಪ್ರಸನ್ವೆಂಕಟಗೋಚರನೆ ತಂದೆ ದೇವ 3
*******