..
ಬಂದು ಸಂಸಾರದಿ ನೊಂದು ತಾಪತ್ರಯದಿ
ಬೆಂದು ಕಂದಿ ಕುಂದಿದೆ ದೇವಾ ಪ
ಪರಮ ಕರುಣಿಯೆ ನಿನ್ನ ಶರಣು ಪೊಕ್ಕಾ ಜನರ
ಪರಿಪಾಲಿಪನೆಂಬ ಬಿರಿದೊ ಅರಿದೂ ನೀನೆ
ಮೆರೆಯದಲೆ ಸಲಹÀಬೇಕೆನ್ನ ನಿನ್ನ
ಚರಣನೀರಜಯುಗ್ಮವನ್ನಾ ತೋರಿ
ಹರುಷವನೆ ನೀಡೆಲೋ ಮುನ್ನಾ ಘನ್ನ
ಪರಮಭಕುತಿ ವಿರಕುತಿ ನೀನೆ ಎನಗಿತ್ತೆನ್ನ
ಹರುಷದಲಿ ಪಾಲಿಸೈಯ್ಯಾ ಜೀಯಾ 1
ಮಾನುಷಾಧಮ ನಾನು ಹೀನಮತಿಯಲಿ ನಿನ್ನ
ಧ್ಯಾನವನು ಮಾಡದಲೆ ಬರಿದೆ ಜರಿದೆ ಇಂಥ
ಹೀನಭವದೊಳಗೆ ಬಾಯಿದೆರದೆ ದಿವ್ಯ
ಜ್ಞಾನಿಜನರನ್ನು ನಾ ಜರಿದೆ ಙÁ್ಞನ
ಹೀನನಾಗಿ ಕಾಲಕಳೆದೆ ಇನ್ನು
ಶ್ರೀನಿವಾಸನೆ ನಿನ್ನ ಧ್ಯಾನ ಮಾಡುವೆನೋವಿ -
ಜ್ಞಾನವನೆ ಪಾಲಿಸಯ್ಯಾ ಜೀಯಾ 2
ಈಸುವತ್ಸರ ನಿನ್ನುಪಾಸನವ ಮಾಡದಲೆ
ರಾಸಭಾನಂತೆ ಬದುಕಿದೆ ದೇವಾ ಈಗ
ವಾಸವಾಗೆಲೋ ಮನದಿ ಸ್ವಾಮೀ ನಾನು
ಈಸಲಾರೆನು ಭವದಿ ಪ್ರೇಮೀ ಎನ್ನ
ಆಸೆ ಪೂರ್ತಿಸೊ ಅಂತರ್ಯಾಮಿ ಇನ್ನು
ಎಸುವಿಧದಲಿ ಸರ್ವೇಶ ಪೇಳಲಿ ಮುನ್ನೆ
ಈಶ ಭವಶ್ರಮ ಕಳಿಯೋ ಈಗಾ ವೇಗಾ 3
ಆವ ಕರ್ಮದಲಿಂದ ಈ ವಸುಮತಿಯಲ್ಲಿ
ಈ ವಿಧಾದಿಂದ ಬಂದೆ ನಿಂದೆ ನಿನ್ನ
ಸೇವಕಾನಲ್ಲವೆ ತಂದೆ ಎನ್ನ
ಆವಾಗ ನೋಡುವಿಯೊ ಮುಂದೆ ಈಗ
ಕಾವವನಾರು ನಾ ಎಂದೆ ವೇಗ
ದೇವ ನಿನ್ನಯ ಪಾದಸೇವೆ ಸುಖವನು ಇತ್ತು
ಆವ(ಅವ)ರಂತೆ ಪೊರೆಯೊ ಎನ್ನಾ ಚೆನ್ನಾ 4
ಉರಗಾದ್ರಿ ನಿಲಯನೆ ವರಭೋಗಿಶಯನನೆ
ಪರಮಪುರುಷನು ಎಂದು ಮೊರೆಯಾ ಇಡುವೆ ನಿನ್ನ
ಪರಿಪರಿಯ ಜನರನ್ನು ಪೊರೆವೆ ಎನ್ನ
ತಿರಸ್ಕಾರ ಮಾಡುವುದು ಥsÀರವೇ ನಿನ್ನ
ಮರಿಯಾದೆಯಲ್ಲಮರತರುವೇ ಕೃಪಾ
ಕರನೇ ಸರ್ವರಿಗು ಸರಿಯಾಗಿ ಇರುತಿರುವಿ
ಗುರುಜಗನ್ನಾಥ ವಿಠಲಾ ವತ್ಸಲಾ 5
***