Showing posts with label ಸಿಂದೂರಗಮನೆ ಸಾರೆ ಮಲಗಿರುವನ್ಯಾರೆ karpara narahari. Show all posts
Showing posts with label ಸಿಂದೂರಗಮನೆ ಸಾರೆ ಮಲಗಿರುವನ್ಯಾರೆ karpara narahari. Show all posts

Monday, 2 August 2021

ಸಿಂದೂರಗಮನೆ ಸಾರೆ ಮಲಗಿರುವನ್ಯಾರೆ ankita karpara narahari

ಸಿಂದೂರಗಮನೆ ಸಾರೆ ಮಲಗಿರುವನ್ಯಾರೆ ಪ


ಸಂದರೀ ಮಂದಿರದೊಳಿವನ್ಯಾರೆ

ಸೌಂದರ್ಯದ ಮ್ಯಾರೆ ಛಂದದಲಿ ನೀ ಸಾರೆ

ಇಂದು ನಭದಲಿ ಚರಿಸುತಲಿ ಮನ

ನೊಂದು ಬೇಸರದಿಂದ ಇಲ್ಲಿಗೆ

ಬಂದು ಮಲಗಿಹನೇನೆ ಸುಖದಿ 1


ಶೀಲೆ ನೋಡಿವನ ಮುಖಕಮಲ

ಸಂಗರದೊಳತಿ ಚಟುಲ ಸುವಿಶಾಲ

ಭುಜಯುಗಲ ಶ್ರೀ ಲಕುಮಿವರ

ಪಾಲ ನಯನ ಮರಾಳ ಧ್ವಜರೊಳ

ಗಾವನೊ ಇವ ಪೇಳುವದು ಕೀಲಾಲಜಾಂಬಕಿ2


ನಾರಿ ಮಾತನಾಡಿಸೇ ಇವನ ಮನ

ಮೋಹದವರನ ಕಮನೀಯ

ಗುಣಯುತನ ವಾರಿಜಾಸನ ಮುಖ್ಯ

ಸುರಪರಿವಾರ ಸೇವಿಯ ಕೊಳುವ ಕಾರ್ಪರನಾರಸಿಂಹನೆ ಪವಡಿಸಿಹನೆ 3

****