Showing posts with label ತಲೆ ಬೆಳಗಾಯಿತು ತಲೆ ಬೆಳಗಾಯಿತು ಎನ್ನ ಬೆಳಗದೊಳು ಕೂಡಿ mahipati. Show all posts
Showing posts with label ತಲೆ ಬೆಳಗಾಯಿತು ತಲೆ ಬೆಳಗಾಯಿತು ಎನ್ನ ಬೆಳಗದೊಳು ಕೂಡಿ mahipati. Show all posts

Wednesday, 1 September 2021

ತಲೆ ಬೆಳಗಾಯಿತು ತಲೆ ಬೆಳಗಾಯಿತು ಎನ್ನ ಬೆಳಗದೊಳು ಕೂಡಿ ankita mahipati

 ತಲೆ ಬೆಳಗಾಯಿತು ತಲೆ ಬೆಳಗಾಯಿತು ಎನ್ನ ಬೆಳಗದೊಳು ಕೂಡಿ ಪ  


ಹಿಂದೆ ಗೋವಿಂದನು ಮುಂದೆ ಮುಕುಂದನು ಅಂದಿಗಿಂದಿಗೆ ಅನಿರುದ್ಧ ತಂದೆ ತಾಯಿಯ ವೃಂದಾವನ ಪತಿಯು ಮಂದರಧರ ಬಂಧು ಬಳಗ 1 

ಕುಂದ ನೋಡದೆ ಸಲಹುವ ಸಂಕರುಷಣಾ ನಂದ ಮೂರುತಿ ತ್ರಿ ವಿಕ್ರಮನ ದುರಿತ ದೂರಮಾಡಿ ದಾಮೋದರ ಚಂದ ಮಾಡುವ ಜನಾರ್ದನನು 2 

ಎಡಕ ಯಾದವ ನಾರಾಯಣ ಕೃಷ್ಣನು ಬಲಕ ಬಾಲಮುಕುಂದ ಎತ್ತ ನೋಡಿದರತ್ತ ಸುತ್ತ ಪುರುಷೋತ್ತಮ ಚಿತ್ತ ಮನದೊಳು ಅಚ್ಯುತನು 3 

ಪ್ರಾಣಪತಿಕರಿಸಿಹ್ಯ ಪ್ರದ್ಯುಮ್ನ ಆಭಯನಿತ್ತಿಹ ಪದ್ಮನಾಭ ಮಾಧವ ಮಧುಸೂದನ ಯದು ಕುಲೋತ್ತಮ ಶ್ರೀಧರನು 4 

ತುಂಬಿ ಹೃಷಿಕೇಶ ದೃಷ್ಟಿಮೂರುತಿ ನರಸಿಂಹ ದೃಷ್ಟಿಯೊಳಗೆ ಹರಿ ವಿಷ್ಣು ವಾಸುದೇವ ಸೃಷ್ಟೇಶ ಗುರು ಕೇಶವನು 5 

ಲಕ್ಷ್ಮಿಯೊಳಗೆ ಗುರು ಲಕ್ಷುಮಿಕಾಂತನು ರಕ್ಷಿಸುವ ಅಭೋಕ್ಷಜನು ಉಪೇಕ್ಷವಿಲ್ಲದೆ ಹೊರೆವ ಉಪೇಂದ್ರನು ಮೂರ್ತಿ ವಾಮನನು 6 

ತುಂಬಿದ ಬಳಗವು ಕಂಡ ಮೇದಿನಿಯೊಳು ಕಂದ ಮಹಿಪತಿ ಸ್ತುತಿಸಿದನು ಬಂದ ಜನ್ಮವು ಕಡೆ ಆಯಿತೆಂದು ಮನದೊಳು ತ್ರಾಹಿ ತ್ರಾಹಿ ಎಂದ 7

****