Showing posts with label ತೋರಿನಿಂದ ವೆಂಕಟನ್ನ ಕೋರಿಕೆಯೆಲ್ಲಾ prasannavenkata. Show all posts
Showing posts with label ತೋರಿನಿಂದ ವೆಂಕಟನ್ನ ಕೋರಿಕೆಯೆಲ್ಲಾ prasannavenkata. Show all posts

Wednesday, 13 October 2021

ತೋರಿನಿಂದ ವೆಂಕಟನ್ನ ಕೋರಿಕೆಯೆಲ್ಲಾ ankita prasannavenkata

 ರಾಗ - : ತಾಳ -


ತೋರಿನಿಂದ ವೆಂಕಟನ್ನ ಕೋರಿಕೆಯೆಲ್ಲಾ ll ಪ ll


ಕೇಳಿ ತಿಳಿದು ಮಾತನಾಡುವ ಧರಣಿಯನಲ್ಲ ll ಅ ಪ ll


ಭವ್ಯವಾಗಿ ಕೇಳುವಿ ನೀ ಸ್ಥಳವು ನಿಲ್ಲಲು l

ದ್ರವ್ಯವಿತ್ತು ಪಡೆಯಬಹುದು ಯೆಲ್ಲಿ ತೋರಿಸು l

ದಿವ್ಯವಾಯಿತು ಯೆನ್ನಯ ಸ್ಥಿತಿ ತಿಳಿಯದಾದೆಯಾ l

ನವ್ಯ ಗುಣಸಂಪನ್ನ ಧರಣೀನಲ್ಲ ಕರುಣಿಸು ll 1 ll


ಆಗಬಹುದು ಸ್ಥಳವನೀಯೆ ಫಲವದಾವುದು l

ಬಾಗುವೆ ಕೇಳ್ ನಿನ್ನ ಸೇವೆ ಮೊದಲದಾಗೋದು l

ಸೋಗಿನಿಂದ ಪೇಳ್ದಮಾತ ಕೇಳಿ ವರಾಹನು l

ಬಾಗಿ ಮುದದೊಳಿತ್ತ ನೂರುಪಾದ ಸ್ಥಳವನು ll 2 ll


ಗಿರಿಯೋಳ್ಹರಿಯು ದ್ವಂದ್ವರೂಪದಿರುವ ಸುಚರಿತ l

ಅರಿವರಿಷ್ಟ ಪಡೆದು ನಿತ್ಯ ಸುಖಗಳವಿರತ l

ನಿರವಧಿಕ ಪ್ರಸನ್ನವೆಂಕಟವಿಟ್ಠಲ ವರಹರು l

ಮೆರೆವರಧಿಕ ಮಹಿಮೆಯಿಂದ ಸುರರು ನಲಿವರು ll 3 ll

***