Showing posts with label ಭಾಷೆ ಹೀನರ ಆಸೆ ಪ್ರಾಣಗಾಸಿ purandara vittala. Show all posts
Showing posts with label ಭಾಷೆ ಹೀನರ ಆಸೆ ಪ್ರಾಣಗಾಸಿ purandara vittala. Show all posts

Friday, 6 December 2019

ಭಾಷೆ ಹೀನರ ಆಸೆ ಪ್ರಾಣಗಾಸಿ purandara vittala

ಪುರಂದರದಾಸರು
ಭಾಷೆ ಹೀನರ ಆಸೆ ಪ್ರಾಣಗಾಸಿ |ಬೇಸತ್ತು ಬೇಲಿ ಮೇಲೊರಗಿದಂತೆ ಪ.

ಚಳಿಗೆ ನಡುಗುತ ಹೋಗಿ ಜಲದೊಳಗೆ ಪೊಕ್ಕಂತೆ |ಮಳೆಯ ರಭಸಕೆ ಮರವನೇರಿ ಕುಳಿತಂತೆ |ಹುಳುವನಟ್ಟುಳಿಗಂಜಿ ಹುತ್ತಿನೊಳು ಹೊಕ್ಕಂತೆ |ಎಳೆನರಿಯು ಒಂಟೆಯಾ ತುಟಿಗೆ ಜೋತಂತೆ 1

ಹಸಿವೆಗಾರದೆ ಬೆಕ್ಕು ಹತ್ತಿಯನು ತಿಂದಂತೆ |ತೃಷೆಗಾರದವ ತೆವರ ತೋಡಿದಂತೆ ||ಬಿಸಿಲಿಗಾರದೆ ಕೋತಿ ಬಂಡೆ ಮೇಲ್ಕುಳಿತಂತೆ |ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ 2

ಹುಸಿಯನಾಡುವರಾಸೆ ಪುರುಷ ನಾರಿಯ ವೇಷಬಿಸಿಲುಗುದಿರೆಯಭಾವ ಒಂದೆ ಕಾಣೊ ||ಬಿಸಜಾಕ್ಷ ವರದ ಶ್ರೀ ಪುರಂದರವಿಠಲನ |ಎಸೆವ ಪಾದದ ಸೇವೆ ಪರಮಸುಖ ಮನುಜಾ 3
***