Showing posts with label ಕೀರ್ತಿ ಕೊಂಡಾಡಲ್ವಶವಲ್ಲವ ಖ್ಯಾತಿ ಕಂಡು ಬೆರಗಾದೆನೆ ದೂತೆ ramesha. Show all posts
Showing posts with label ಕೀರ್ತಿ ಕೊಂಡಾಡಲ್ವಶವಲ್ಲವ ಖ್ಯಾತಿ ಕಂಡು ಬೆರಗಾದೆನೆ ದೂತೆ ramesha. Show all posts

Wednesday, 4 August 2021

ಕೀರ್ತಿ ಕೊಂಡಾಡಲ್ವಶವಲ್ಲವ ಖ್ಯಾತಿ ಕಂಡು ಬೆರಗಾದೆನೆ ದೂತೆ ankita ramesha

ಕೀರ್ತಿ ಕೊಂಡಾಡಲ್ವಶವಲ್ಲವ ಖ್ಯಾತಿ ಕಂಡು ಬೆರಗಾದೆನೆ ದೂತೆ ಪ.


ಗಣನೆ ಇಲ್ಲದೆ ದ್ರವ್ಯ ಕೊಡುವೋನರಾಯಗೆ ಕ್ಷಣ ತೆರವಿಲ್ಲವೆಂಬೊ ಬಿರುದು 1

ಸಟಿ ಇಲ್ಲದೆ ದ್ರವ್ಯ ಕೊಡುವೋನು ರಾಯಗೆ ತೃಣ ತೆರವಾಗದೆಂಬೋ ಬಿರುದು 2

ಹಲವು ದಾನಗಳನ್ನ ಕೊಡುವೋನುರಾಯಗೆ ಹಲವು ಕೊಡುವೋನೆಂಬ ಬಿರುದು 3

ಲೆಕ್ಕವಿಲ್ಲದೆ ದಾನ ಕೊಡುವೋನು ಕೀರ್ತಿಸಲು ಶಕ್ಯವಿಲ್ಲ ಆತನ ಬಿರುದು4

ಮಿತಿ ಇಲ್ಲದೆ ದ್ರವ್ಯ ಕೊಡುವೋನು ಕೀರ್ತಿ ಅತಿಶಯವಮ್ಮ ಆತನ ಬಿರುದು 5

ಕರೆದು ಕರೆದು ದ್ರವ್ಯ ಕೊಡುವೋನುರಾಯನ ಕರ ತೆರವಾಗದೆಂಬ ಬಿರುದು 6

ಕೃಷ್ಣಾರ್ಪಣೆಂತೆಂಬೋದು ರಾಯಗೆ ಇಷ್ಟಕರತೆರವಾಗದು7

ಅತ್ಯಂತ ಪ್ರೇಮ ಸೂಸುತ ರಾಯ ದಿವ ರಾತ್ರಿಯಲಿತತ್ವ ಕೇಳುತಲಿವ 8

ನಿದ್ರೆ ಇಲ್ಲವು ರಾಯಗೆ ಏನೇನುನಮ್ಮ ಮುದ್ದು ರಮೇಶ ನಂಫ್ರಿಯ ಧ್ಯಾನ 9

****