..
kruti by ಲಕ್ಷ್ಮೀನಾರಯಣರಾಯರು Lakshminarayanaru
ವಂದಿಸಿ ಬೇಡುವೆ ನವಗ್ರಹರ
ಕುಂದುಗಳೆಣಿಸದೆ ಬಂದು ರಕ್ಷಿಸಲೆಂದು ಪ
ಭಾಸುರ ಸೂರ್ಯನು ಭಾಸಿಸಲಿ ತತ್ವವನು
ಶ್ರೀ ಸಹೋದರ ಚಂದ್ರ ತೋಷವನು
ಸೂಸಿ ಕೊಡಲಿ ಮಂಗಳವನು ಮಂಗಳ
ಲೇಸಾದ ಪಾಂಡಿತ್ಯ ಪಂಡಿತನೀಯಲಿ 1
ಹಿಂಗದ ಗೌರವ ತುಂಗ ಶ್ರೀಗುರು ಕೊಡಲಿ
ಕಂಗೊಳಿಸುವ ಕವಿತೆ ಕವಿ ಕೊಡಲಿ
ಭಂಗವಿಲ್ಲದ ಸುಖಸಂಪತ್ತು ಶನಿ ಕೊಡಲಿ
ಕಂಗೆಡಿಸುವ ರುಜೆ ರಾಹು ತಪ್ಪಿಸಲಿ 2
ಹಿಡಿದ ಕೆಲಸದಲ್ಲಿ ಹಿಡಿಸಲಿ ಜಯಧ್ವಜವ
ಬಿಡದಲೆ ಧ್ವಜಿಯು ಸಡಗರದಿ
ಕಡು ನವಗ್ರಹಗಳು ಪಿಡಿಗ್ರಹವಾಗಲಿ
ಕೊಡಲಿ ನವನವ ಸಿರಿ ದೃಢದಿ ದಿನದಿನದಿ 3
ಕರುಣಿ ಶನೈಶ್ಚರ ತರಣಿ ಕುಮಾರ
ವರಗುಣ ಮಣಿ ಹಾರ ದಾರಿದ್ರ್ಯದೂರ
ಹರಿಸು ಅರಿಷ್ಟವ ಸುರಿಸು ಮನೇಷ್ಟವ
ಎರಗುವೆ ಸಂಕಟಗೊಳಿಸದಿರುತ್ಕಟ 4
ಸಿರಿ ವಾದಿರಾಜರು ಒರೆದ ಗ್ರಹಸ್ತ್ರೋತ್ರವ
ನಿರುತದಿ ಪಠಿಸಲು ಗ್ರಹ ಪೀಡೆಯು
ಸರಿದು ತಾಂ ಪೋಪುದು ಅರಿಯ ನಿಗ್ರಹವಹುದು
ತುರುಗಗ್ರೀವನ ದಯದಿ ಸರ್ವ ಸಂಪದಬಹುದು 5
ಗೀರ್ವಾಣ ಭಾಷೆಯಲಿರುವ ಈ ಸ್ತುತಿಯನ್ನು
ಚಾರು ಕನ್ನಡ ಗೀತ ರೂಪದಿಂದ
ಸಾರಿದ ಲಕ್ಷ್ಮೀನಾರಾಯಣ ಶರ್ಮನು
ಕೋರುವ ಕೃಪೆಯನ್ನು ಸಾಧು ಸಜ್ಜನರನ್ನು 6
ನಮೋ ರವಿ ಸೋಮನೆ ನಮೋ ಕುಜಸೌಮ್ಯನೆ
ನಮೋ ಗುರು ಭಾರ್ಗವ ನಮೋ ಶನೈಶ್ಚರನೇ
ನಮೋ ರಾಹು ಕೇತುವೇ ನಮೋ ಮೃತ್ಯುದೈವವೇ
ನಮೋ ಭೂತಗಣನಾಥ ನಮೋ ಲಕ್ಷ್ಮೀಕಾಂತ 7
***