Showing posts with label ಶ್ರೀರಾಘವೇಂದ್ರ ಚಂದ್ರ ಬಾರೈ ಮಹಾಮುನೀಂದ್ರ vittalesha. Show all posts
Showing posts with label ಶ್ರೀರಾಘವೇಂದ್ರ ಚಂದ್ರ ಬಾರೈ ಮಹಾಮುನೀಂದ್ರ vittalesha. Show all posts

Monday, 6 September 2021

ಶ್ರೀರಾಘವೇಂದ್ರ ಚಂದ್ರ ಬಾರೈ ಮಹಾಮುನೀಂದ್ರ ankita vittalesha

 ankita ವಿಠಲೇಶ  

ರಾಗ: ಮಿಶ್ರಪಹಾಡಿ ತಾಳ: ಕೇರವ


ಶ್ರೀ ರಾಘವೇಂದ್ರ ಚಂದ್ರ 

ಬಾರೈ ಮಹಾಮುನೀಂ. . . ದ್ರ


ನೂರಾರು ತಾಪದಿಂದ 

ಮೀರಿರ್ದ ಖೇದದಿಂದ

ಕಾರುಣ್ಯಸಿಂಧುವೆಂದು 

ಸಾರಿದೆನೋ ನಿನ್ನೊಳಿಂದು 1

ರೋಗಾದಿ ಭೋಗದಿಂದ 

ತಾಗಿದ ಭವಾಗ್ನಿಯಿಂದ

ಯೋಗೀಶ ನೊಂದೆನಿಂದು 

ಬಾಗುವೆನೊ ಪೊರೆಯೋ ಬಂದು 2

ಪಾಪಾತ್ಮ ದ್ರೋಹಿ ಎಂದು 

ಕೋಪಿಸಿದೊಡೆನ್ನೊಳಿಂದು

ಶ್ರೀಪಾದ ಬಾಳ್ವೆನೆಂದು 

ನೀ ಪೊರೆಯದಿರ್ದೊಡಿಂದು 3

ಅನುಗಾಲ ನಂಬಿ ನಿನ್ನ 

ದಿನರಾತ್ರಿ ನೆನೆದು ನಿನ್ನ

ಮುನಿರಾಯ ಜೀವಿಪೇಂ ನಾ 

ಕನಿಕರದಿ ನೋಳ್ಪುದೆನ್ನ 4

ಎಂದಾದರೊಮ್ಮೆ ಬಂದು 

ಮುಂದೆಸೆದು ಶೋಭಿಸೆಂದು

ತಂದೆ ವಿಠಲೇಶಗಿಂದು 

ವಂದಿಸುವೆ ರಕ್ಷಿಸೆಂದು 5

***