RAO COLLECTIONS SONGS refer remember refresh render DEVARANAMA
ಭಾಸುತ ಬಂದ ನೋಡಿ ಭಾಸ್ಕರಕೋಟಿ ತೇಜ ಲೇಸು ಲೇಸಾಯಿತೆನ್ನ ಮನದೊಳಗೆ ಪ
ಹೊಳೆಯುತ ಸುಳಿಯುತ ಥಳಥಳಗುಡುತ ಒಲಿಯುತ ಬಂದ ನೋಡಿ ಎನ್ನೊಳಗೆ 1
ಕರುಣ ಕವಚವ ತೊಟ್ಟು ವರಮುನಿಗಳ ಪ್ರಾಣ ಹರುಷ ಬೀರುತ ಬಂದ ತ್ವರಿತಿಲ್ಲಿಗೆ 2
ದೀನ ದಯಾಳು ಎನ್ನ ಅನಾಥ ಬಂಧು ಸ್ವಾಮಿ ಸನಾಥ ಮಾಡಲಿ ಬಂದ ಮಹಿಪತಿಗೆ 3