Showing posts with label ರಾಘವೇಂದ್ರ ಯತಿರಾಯಾ ದುರಿತೌಘಹಂತಕ ಮಂತ್ರನಿಲಯ tandevenkatesha vittala. Show all posts
Showing posts with label ರಾಘವೇಂದ್ರ ಯತಿರಾಯಾ ದುರಿತೌಘಹಂತಕ ಮಂತ್ರನಿಲಯ tandevenkatesha vittala. Show all posts

Monday, 6 September 2021

ರಾಘವೇಂದ್ರ ಯತಿರಾಯಾ ದುರಿತೌಘಹಂತಕ ಮಂತ್ರನಿಲಯ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಭೈರವಿ ತಾಳ: 


ರಾಘವೇಂದ್ರಯತಿರಾಯಾ ದುರಿತೌಘಹಂತಕ ಮಂತ್ರನಿಲಯ


ತ್ಯಾಗಶೀಲನೆ ಭಕ್ತಿಯೋಗಾದಿ ಹರಿಯನು- 

ರಾಗ ಸಂಪಾದಿಸಿ ಭಾಗವತೋತ್ತಮ-

ರಾಗಿ ಸೂಕರತನಯೆತೀರದಿ ಯಾಗಮಂಟಪಮಧ್ಯರಂಗದಿ 

ಆಗಮಾಲಯ ಸ್ಥಾಪಿಸುತ ಭವರೋಗಹರನೆಂದೆನಿಸಿ ಮೆರೆದೇ ಅ ಪ


ವೀರವೈಷ್ಣವ ಭಕ್ತಾಗ್ರಣಿಯೇ ಅಮರಾರಿ ಪರಿಪರಿ ನಿನ್ನ ಹಣಿಯೇ

ತೋರಾದೆ ಲವಭಯ ಮಾರಜನಕ ಭಕ್ತಿ

ಪಾರವಶ್ಯದಿ ಚೋದ್ಯ ತೋರಿ ಮೂಜ್ಜಕೆಲ್ಲಾ 

ಧೀರ ಶರಣಾಧಾರ ವಜ್ರಶರೀರ ವಿಶ್ವಸಂಸಾರ ನೃಹರಿಯ 

ತೋರಿ ಕಂಭದಿ ದಾಸ ಪಂಥೋದ್ಧಾರ ಮಾಡಿದಪಾರ ಶ್ರೀಕರ 1

ಖಂಡಿತಪರವಾದಿತಂಡ ಭೂಮಂಡಲಮಂಡಿತ ತರ್ಕಶೌಂಡ 

ಖಂಡಪರಶು ಲಕ್ಷ್ಮೀಗಂಡರೊಂದೆಂಬ ವಿ-

ತ್ತಂಡತಾರ್ಕೀಕರ ದಿಂಡುರುಳಿಸೀ ಮಿಶ್ರ-

ಮಂಡನಾದಿ ಪ್ರಚ್ಚನ್ನಬೌದ್ಧರ ಹಿಂಡುಗಜಹರ್ಯಕ್ಷ ಜಯ ಜಯ 

ಡಿಂಡಿಮೋತ್ಸವಮಾಗೆಮೆರೆದೆಯೊ ಗಂಡುಗಲಿಗುರುವ್ಯಾಸಯತೀಶ 2

ಮಂತ್ರನಿಕೇತನಸದನಾ ಪಾಹಿ ಭ್ರಾಂತಿಜ್ಞಾನ ಸಂಹನನ 

ಪ್ರಾಂತಾದಿ ಜನ ದುಃಖಾಕ್ರಾಂತರಾಗಿರೆ ನಿಮ್ಮ 

ಮಂತ್ರೋಚ್ಚಾರಣೆಯಿಂ ನಿಶ್ಚಿಂತರಾಗುವರಯ್ಯ 

ಸ್ವಾಂತಧ್ವಾಂತಾನಂತರವಿ ಸಿರಿಕಾಂತ ತಂದೆವೆಂಕಟೇಶವಿಠಲನೇ- 

ಕಾಂತಭಕ್ತನೆ ಪರಿಮಳಾದಿ ಸದ್ಗ್ರಂಥ ರಚಿಸಿರುವಂಥ ಸಂತ 3

***

ಸೂಕರ ತನಯೆ=ತುಂಗ-ಭದ್ರೆ; ಅಮರಾರಿ=ದೈತ್ಯ; 

ಹಣಿ=ದಂಡಿಸು; ಲವ=ಸ್ವಲ್ಪವೂ; ಪಾರವಶ್ಯ=ತನ್ಮಯತೆ; 

ಚೋದ್ಯ=ಸೋಜಿಗ, ವಿಸ್ಮಯ; ಖಂಡಿತ=ಖಂಡಿಸಲ್ಪಟ್ಟ; 

ತರ್ಕಶೌಂಡ=ತರ್ಕನಿಪುಣ; ಖಂಡ ಪರಶು=ಶಿವ; 

ವಿತ್ತಂಡ ತಾರ್ಕಿಕ=ಹುರುಳಿಲ್ಲದ ವಾದಮಾಡುವವ; 

ದಿಂಡು=ಗರ್ವ; ಮಿಶ್ರಮಂಡನಾದಿ=ಮಂಡನ ಮಿಶ್ರ; 

ಪ್ರಚ್ಚನ್ನ=ವೇಷ ಮರೆಸಿದ; ಹರ್ಯಕ್ಷ=ಸಿಂಹ; 

ಜಯ ಡಿಂಡಿಮ=ಜಯಭೇರಿ; ಸ್ವಾಂತ ಧ್ವಾಂತಾನಂತ 

ರವಿ=ಅಂತಃಕರಣದ ಕತ್ತಲೆಗೆ ಸೂರ್ಯನಂತೆ;