Showing posts with label ಉಯ್ಯಾಲೆಯ ನೀರಜೋದರನಾಡಿದಾ ನಿಗಮಾಂತ ನಾರೀಜನರು ಪಾಡಲೂ vaikunta vittala. Show all posts
Showing posts with label ಉಯ್ಯಾಲೆಯ ನೀರಜೋದರನಾಡಿದಾ ನಿಗಮಾಂತ ನಾರೀಜನರು ಪಾಡಲೂ vaikunta vittala. Show all posts

Sunday 1 August 2021

ಉಯ್ಯಾಲೆಯ ನೀರಜೋದರನಾಡಿದಾ ನಿಗಮಾಂತ ನಾರೀಜನರು ಪಾಡಲೂ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಉಯ್ಯಾಲೆಯ ನೀರಜೋದರನಾಡಿದಾ

ನಿಗಮಾಂತ ನಾರೀಜನರು ಪಾಡಲೂ ಪ


ಕರಪಾಣಿಪಲ್ಲವಗಳೂ ವದನ

ಸರಸಿರುಹ ನುಡಿ ಶುಕಪಿಕಗಳೂ

ಮೆರೆವ ಯೌವನದ ವಸಂತಾ ನಾದ ಶ್ರೀ

ಧರಣಿಯರ ಮಧ್ಯದಲ್ಲೀ1


ದೆಸೆದೆಸೆಗೆ ಪ್ರಜ್ವಲಿಸುವಾ ನವರತುನ

ವೆಸೆವ ಮಿಸುನಿಯ ಹಲಗೆಗೆ

ಮಿಸುನಿ ಸರಪಣಿ ತಳ್ವಕೇ ಫಣಿಪ ಶೋ

ಭಿಸುವೊಡಲ ನೀಡು ಮಾಡೀ 2


ಉಯ್ಯಾಲೆಯುಲಹಿಗಳುಕೀ ಸತಿಯರುರೆ

ಮೈಯನುರದಾ ಲೊರಗಿಸೀ

ವೈಯಾರದಿಂದಲಿಪ್ಪೇ ಸುಖ ಪುಳಕ

ಕೈಯೊಡನೆ ತನುವ ತೀಡೇ 3


ಎಡದ ಧರಣಿಯ ನೋಡಲೂ ಬಲದ ರಮೆ

ಕಡುಮುನಿಯೆ ಸಂತವಿಸುತಾ

ಒಡನೆ ಭೂದೇವಿ ಮುನಿಯೇ ಮನ್ನಿಸುವ

ಸಡಗರದಿ ಜಗವ ಮೋಹಿಸೀ 4


ಎಡದ ಕೈಯಿಂದಿಂದಿರೇ ಧರಣಿ ತಾ

ಪಿಡಿದು ಬಲಗೈಯಿಂದಲೇ

ಬಿಡದೆ ತಮ್ಮತ್ತ ಸೆಳೆಯೇ ಸಮ್ಮದದ

ಕಡಲ ಮಧ್ಯದಿ ಮುಳುಗುತಾ 5


ಅರಿ ಶಂಖ ಕೌಮೋದಕೀ ಸರಸಿರುಹ

ವರಕರ ಚತುಷ್ಟಯಗಳೂ

ಮಿರುಪ ಕುಂಡಲ ಕಿರೀಟಾ ನಗೆಮೊಗದ

ಸುರರತಾತನ ಜನಕನೂ 6


ಅಂಬುಜಾಂಘ್ರಿಯ ತಡೆಯದಾ ಪೊಂಬಣ್ಣ

ದಂಬರದ ಸಿರಿಯ ನಡುವಿನಾ

ಇಂಬಾದುರದ ಪದಕದಾ ಮನಹಾರ

ಕಂಬುಕಂಠದ ಚೆನ್ನಿಗಾ 7


ಹರಿಯ ಮೈಸೋಂಕಿನಿಂದಾ ಶರೀರಗಳ

ಮರೆದು ಶ್ರೀ ಭೂಸತಿಯರೂ

ಸುರತರುವ ಬಿಗಿದಪ್ಪಿದಾ ಕಲ್ಪಲತೆ

ಗೊರೆವನ್ನಲು ಪರಿಶೋಭಿಸೀ 8


ಹೂತ ಹೊಂಬಳ್ಳಿಗಳನೇ ತೊಡಿಗೆಯಿಂ

ಜೋತೊರಗುತಿಕ್ಕೆಲದಲೀ

ಶ್ರೀತರುಣಿ ಧರಣಿ ಮೆರೆಯೇ ವೈಕುಂಠ

ಪ್ರೀತ ಚನ್ನನಾಡಿದನುಯ್ಯಲಾ 9

***