Showing posts with label ಎನ್ನ ಹುಯಿಲು ಕೇಳಬಾರದೆ ಸ್ವಾಮಿ ನಿನಗೆ ಎನ್ನ ಮೊರೆಯು hayavadana ENNA HUYILU KELABAARADE SWAMI NINAGE ENNA MOREYU. Show all posts
Showing posts with label ಎನ್ನ ಹುಯಿಲು ಕೇಳಬಾರದೆ ಸ್ವಾಮಿ ನಿನಗೆ ಎನ್ನ ಮೊರೆಯು hayavadana ENNA HUYILU KELABAARADE SWAMI NINAGE ENNA MOREYU. Show all posts

Saturday, 11 December 2021

ಎನ್ನ ಹುಯಿಲು ಕೇಳಬಾರದೆ ಸ್ವಾಮಿ ನಿನಗೆ ಎನ್ನ ಮೊರೆಯು ankita hayavadana ENNA HUYILU KELABAARADE SWAMI NINAGE ENNA MOREYU



ಎನ್ನ ಹುಯಿಲು ಕೇಳಬಾರದೆ ಪ.


ಸ್ವಾಮಿ ನಿನಗೆ ಎನ್ನ ಮೊರೆಯು ಕೇಳಬಾರದೆ ಪ್ರ-ಸನ್ನ ಚೆನ್ನಕೇಶವರಾಯ ನಿನಗೆ ಅ.ಪ.


ಪಾಲಸಾಗರ ಮಧ್ಯದಲ್ಲಿ ಏಳು ಸುತ್ತಿನ ಎಸೆವ ಕೋಟೆನೀಲಮಾಣಿಕ್ಯ ವಜ್ರದಿಂದ ಗಾ[ರೆ]ನಿಕ್ಕಿದ ಸೆಜ್ಜೆ[ಗೃಹ]ಮೇಲೆ ಶೇಷನೊರಗು ಹಾಸಿಕೆ ಶ್ರೀರುಕ್ಮಿಣಿ ಸತ್ಯಭಾಮೆರೊಡನೆ ಸರಸ-ಸಲ್ಲಾಪನೆ ಸ್ವಾಮಿ ಕೇಳು ಸಾಮಗಾನವೇದಘೋಷಣೆ 1


ಸುತ್ತಲು ಒಪ್ಪುವ ಸನಕಾದಿಗಳು ಮೊತ್ತದಿಂದ ದೇವತೆಯರುಮತ್ತೆ ಊರ್ವಶಿ ರಂಭೆ ಮೇನಕೆ ಭಕ್ತನಾರದರ ಗೀತಸುತ್ತ ಸುರರ ದುಂದುಭಿ ವಾಲಗ ಅಸುರರ ಕತ್ತರಿಸಿ ಕಡಿವ ಕಾಳಗಭಕ್ತಜನರಿಷ್ಟಾರ್ಥವನ್ನು ಕೊಡುವ ಊಳಿಗ2


ಮುನ್ನ ಈ ಭಾಗ್ಯ ಇದ್ದುದಿಲ್ಲವೆ ಸ್ವಾಮಿ ನಿಮಗೆಬನ್ನಬಟ್ಟು ಧರ್ಮನರಸಿ ಸಭೆಯಲೊದರಲು ಅಕ್ಷಯವೆಂದುಸನ್ನೆಯಿಂದ ಕರಿಯ ಸಲಹಿದೆ ಅಜಾಮಿಳನ್ನ ನಿನ್ನ ಪ-ಟ್ಟಣಕೆ ಕರೆಸಿದೆ ಹಯವದನ್ನ ಎನ್ನ ನೀನು ಸಲಹಲಾಗದೆ 3

***