Showing posts with label ರಕ್ಷಿಸೋ ಎನ್ನ ರಕ್ಷಿಸೋ ರಕ್ಷಿಸು ಎನ್ನನು ಅಕ್ಷಯಗುಣ varaha timmappa RAKSHISO ENNA RAKSHISO RAKSHISU ENNANU AKSHAYA GUNA. Show all posts
Showing posts with label ರಕ್ಷಿಸೋ ಎನ್ನ ರಕ್ಷಿಸೋ ರಕ್ಷಿಸು ಎನ್ನನು ಅಕ್ಷಯಗುಣ varaha timmappa RAKSHISO ENNA RAKSHISO RAKSHISU ENNANU AKSHAYA GUNA. Show all posts

Friday, 19 November 2021

ರಕ್ಷಿಸೋ ಎನ್ನ ರಕ್ಷಿಸೋ ರಕ್ಷಿಸು ಎನ್ನನು ಅಕ್ಷಯಗುಣ ankita varaha timmappa RAKSHISO ENNA RAKSHISO RAKSHISU ENNANU AKSHAYA GUNA



by ನೆಕ್ಕರ ಕೃಷ್ಣದಾಸರು

ರಕ್ಷಿಸೋ ಎನ್ನ ರಕ್ಷಿಸೋ ||ಪ||

ರಕ್ಷಿಸು ಎನ್ನನು ಅಕ್ಷಯಗುಣಪೂರ್ಣ
ಲಕ್ಷುಮಿರಮಣನೆ ಪಕ್ಷಿವಾಹನನೆ ||ಅ.ಪ||

ಪಾದವಿಲ್ಲದೆ ಜಲದೊಳು ಮುಳುಗಾಡಿ
ವೇದಚೋರಕನನ್ನು ಸೀಳಿ ಬಿಸಾಡಿ
ವೇದಾಚಲದೊಳು ನಿಂತು ಕೈ ನೀಡಿ
ಸಾಧು ಸಜ್ಜನಪಾಲ ನೀ ದಯಮಾಡಿ||೧||

ವಾರಿಧಿಮಥನದಿ ಸುರರಿಗೆ ಒಲಿದು
ಮೇರುಮಂದರವನ್ನು ನೀ ಹೊತ್ತೆ ಬಲಿದು
ವಾರಿಜಾಕ್ಷನೆ ವೈಕುಂಠದಿಂದಿಳಿದು
ಊರಿದೆ ಚರಣವ ಗಿರಿಯೊಳು ನಲಿದು ||೨||

ಧರಿಣಿಯ ಒಯ್ದ ದಾನವಗಾಗಿ ನೀನು
ಹರಣದ ಸೂಕರನಂತಾದುದೇನು
ಚರಣಸೇವಕರಿಗೆ ನೀ ಕಾಮಧೇನು
ಕರುಣದಿ ಸಲಹೆನ್ನ ನಂಬಿದೆ ನಾನು ||೩||

ತರಳನು ಕರೆಯೆ ಕಂಬದೊಳುದಿಸಿದೆಯೊ
ದುರುಳದಾನವರ ಪ್ರಾಣವ ವಧಿಸಿದೆಯೊ
ಕರುಳಮಾಲೆಯ ಕೊರಳೊಳು ಧರಿಸಿದೆಯೊ
ಮರಳಿ ಬಂದವ ಫಣಿಗಿರಿಯನೇರಿದೆಯೊ ||೪||

ಕೋಮಲರೂಪದಿ ಭೂಮಿಯನಳೆದೆ
ಆ ಮಹಾ ಬಲಿಯ ಪಾತಾಳಕೆ ತುಳಿದೆ
ಸ್ವಾಮಿ ಪುಷ್ಕರಣಿಯ ತೀರದಿ ಬೆಳೆದೆ
ಪ್ರೇಮದಿ ಭಕ್ತರ ಕಾಮಿಸಿ ಪೊರೆದೆ ||೫||

ತಾತನಪ್ಪಣೆಯಂತೆ ಮಾತೆಗೆ ಮುನಿದೆ
ಜಾತಿಕ್ಷತ್ರಿಯರ ವಿಘಾತಿಸಿ ತರಿದೆ
ನೂತನವಾಗಿಹ ನಾಮದಿ ಮೆರೆದೆ
ಧಾತುಗೆಟ್ಟೆನು ಸ್ವಧೈರ್ಯಗಳಿರದೆ ||೬||

ದಶರಥನುದರದಿ ಶಿಶುವಾಗಿ ಬಂದೆ
ವಸುಮತಿತನುಜೆಯ ಕುಶಲದಿ ತಂದೆ
ಅಸುರರ ಹೆಸರನುಳಿಸದೆ ನೀ ಕೊಂದೆ
ಕುಸುಮನಾಭನೆ ಶೇಷಗಿರಿಯಲ್ಲಿ ನಿಂದೆ ||೭||

ಮಧುರೆಯೊಳುದಿಸಿ ಗೋಕುಲದಲ್ಲಿ ಬೆಳೆದೆ
ಉದಧಿಯ ಮಧ್ಯದಿ ದುರ್ಗವ ಬಲಿದೆ
ಹದಿನಾರು ಸಾವಿರ ಸತಿಯರ ನೆರೆದೆ
ಉದಯವಾದೆಯೊ ವೇದಗಿರಿಯೊಳು ನಲಿದೆ ||೮||

ಶಶಿಮುಖಿಯರನು ಮೋಹಿಸುವಂಥ ಬಗೆಗೆ
ವ್ಯಸನವ ಬಿಡುವುದುಚಿತವೇನೊ ನಿನಗೆ
ವಸುಧೆಗುತ್ತಮ ಎಸೆವಂಥ ಗಿರಿಯೊಳು
ಹಸನಾಗಿ ನಿಂತಿಹ ಚರಣ ಸನ್ನಿಧಿಯೊಳು ||೯||

ವಾಜಿಯನೇರಿ ನೇಜಿಯ ಪಿಡಿದೆ
ಮಾಜುವ ಕಲಿಯನ್ನು ಕಡೆಯೊಳು ಕಡಿದೆ
ಮೂಜಗದೊಡೆಯನ ಮನದೊಳು ಇಡುವೆ
ಮಾಜ ಬೇಡೆಲೊ ವೇಂಕಟೇಶ ಎನ್ನೊಡವೆ ||೧೦||

ಹತ್ತವತಾರದ ವಿಸ್ತಾರದಿಂದ
ಕರ್ತುವರಾಹ ತಿಮ್ಮಪ್ಪನು ನಿಂದ
ಭೃತ್ಯವತ್ಸಲನಾಗಿ ಭೂಮಿಗೆ ಬಂದ
ಅರ್ಥಿಯೊಳ್ಭಕ್ತರ ಸಲಹುವೆನೆಂದ ||೧೧||
****

ಪೂರ್ವಿ ರಾಗ ಅಷ್ಟತಾಳ (raga, taala may differ in audio)