Showing posts with label ವರುಣಗೂ ನಾರಾಯಣಗು ನೆಂಟತನ pranesha vittala. Show all posts
Showing posts with label ವರುಣಗೂ ನಾರಾಯಣಗು ನೆಂಟತನ pranesha vittala. Show all posts

Saturday, 16 November 2019

ವರುಣಗೂ ನಾರಾಯಣಗು ನೆಂಟತನ pranesha vittala

by ಪ್ರಾಣೇಶದಾಸರು
ವರುಣಗೂ ನಾರಾಯಣಗು ನೆಂಟತನ ಮಾಡುವದಕೆ |ಸರಿಯೆ ಸಂದೇಹವೇನು ಸಮ್ಮೀಸಿ ನೋಡಿರಿ ಪ

ಹೆಂಡಾರು ಬಹು ಮಂದಿ ಜಾರಾ ಪುತ್ರನು ಒಬ್ಬ |ಪಂಡೀತ ಮಗನೊಬ್ಬ ಸಮನೆಲ್ಲಿ ನೋಡಿ1

ವಂಶಾ ವಂದೆ ಇಬ್ಬರದು ಛಲದಿಂದ ಕೊಲ್ಲುವಂಥಾ |ಕೂಸು ಪಾಲಿಸಿದಾರು ಸಮನೆಲ್ಲಿ ನೋಡಿ 2

ಸ್ಥೂಲಾ ವಿಗ್ರಹದವರು ಜಡ ಚೇತನಗಳಿಗೆ |ಆಲಯವಾಗಿಹರು ಸಮನೆಲ್ಲಿ ನೋಡಿ 3

ಕನಕಾ ಭೂಮಿ ವಜ್ರದಾಹಾರ ಒಬ್ಬಾಗೊಬ್ಬಾಗೆ |ವನಮಾಲಿವೈಜಯಂತಿಸಮನೆಲ್ಲಿ ನೋಡಿ 4

ತುಳಿಸೀಕೊಂಡೂ ಕೋಪಿಸದೆಲೆವೇ ಹಿಗ್ಗಿದಾರು |ಕಲುಷಾ ವಿದೂರರೂಪಸಮನೆಲ್ಲಿ ನೋಡಿ 5

ದ್ವಾರಕ ಪಟ್ಟಣವ ಪ್ರೀತಿಂದ ಪಾಲೀಸೀ |ಹಾರಾವ ಮಾಡಿದಾರು ಸಮನೆಲ್ಲಿ ನೋಡಿ 6

ವೃದ್ಧಿ ಹ್ರಾಸಗಳಿಲ್ಲಾ ಅನ್ನಾದಾಪೇಕ್ಷವಿಲ್ಲ |ನಿದ್ರಾ ಶೂನ್ಯರಾಗಿಹರು ಸಮನೆಲ್ಲಿ ನೋಡಿ 7

ಸರಸೀಜಾರೂಪಉಳ್ಳವರು ಪೂರ್ತಿ ಮಾಡಿದಾರು |ಸುರರಾ ಮನೋಭೀಷ್ಟಿಯಾ ಸಮನೆಲ್ಲಿ ನೋಡಿ 8

ವಿಧಿಯಿಂದ ಜನಿಸಿದಾರು ಜನರೀಗಸಹ್ಯವಾಗಿ |ಒದರುವರು ಇದರಿಂದ ಸಮನೆಲ್ಲಿ ನೋಡಿ 9

ನೂತನ ಯಜೊÕೀಪವೀತಾವ ಧರಿಸುವರು ಪ್ರ- |ಖ್ಯಾತಿ ವಸ್ತು ಕೊಟ್ಟಾರು ಸಮನೆಲ್ಲಿ ನೋಡಿ 10

ದಾರಿ ತೋರಿದಾರು ವಾನರಾಗಳಿಗೆ ಗುಂಜಿ |ಹಾರಾಯೀಸೂವರಿದು ಸಮನೆಲ್ಲಿ ನೋಡಿ11

ವಾಸಾವಿವರ್ಜಿತಾರು ದ್ವೇಷಿಗಳ ಶರೀರ |ನಾಶಾಗೈಸಿದರಿದು ಸಮವೆಲ್ಲಿ ನೋಡಿ12

ಶೋಧಿಸೀ ನೋಡಿದಾರೆ ಕರ್ದಾಮ ಜಾಲಯಳ |ಭ್ಯೋದಯಕ್ಕೆ ಕಾರಣರು ಸಮವೆಲ್ಲಿ ನೋಡಿ13

ಧರಿಗಾನಂದಾವಿತ್ತಾರಾಲಂಕಾರವಾಗಿ ಖಳರಾ |ತರಿದು ಭಾರವ ಕಳದು ಸಮವೆಲ್ಲಿ ನೋಡಿ 14

ಶ್ರೀನಿವಾಸಾಗೆ ಮಾವನೀತಾ ನೀತಾಗು ಹಾಗೆ |ಪ್ರಾಣೇಶ ವಿಠ್ಠಲನು ಸಮವೆಲ್ಲಿ ನೋಡಿ 15
********