RAO COLLECTIONS SONGS refer remember refresh render DEVARANAMA
ankita ಶ್ರೀಕರವಿಠಲ
ರಾಗ: ಶಹನ ತಾಳ: ತ್ರಿ
ಸಲಹೊ ಸಲಹೊ ಕರುಣಾಶರಧಿಯೆ
ಕೋಲಜಾತತೀರನಿವಾಸ ಪ
ಬೃಂದಾವನದಿ ನಿಂದ ಮುನೀಂದ್ರ
ಮಂದಜನೌಘಕೆ ಕಲ್ಪ ಸುಭೂಜ 1
ದೇವಸ್ವಭಾವ ಭೂದೇವವರೇಣ್ಯ
ಕೋವಿದ ಪಂಡಿತ ಪಾವನಕಾಯ 2
ಶ್ರೀಮಹಿವಲ್ಲಭ ಶ್ಯಾಮಸುಂದರ
ಪ್ರೇಮ ಪಡೆದ ನಿಷ್ಕಾಮಿ ಪ್ರಹ್ಲಾದನೆ 3
***