ಕೊಳಲೇನು ಪುಣ್ಯವ ಮಾಡಿ
ರಂಗನ ಬಳಿಗೆ ಬಂದಿತೇ ||ಪ||
ನಳಿನ ನೇತ್ರಿಯರ ಮನಸು
ಎಲ್ಲಾ ಸೆಳೆದು ಪೋದೀತೇ ||ಅ.ಪ||
ವನಜನಾಭನು ಯಮುನೆಯಲ್ಲಿ ಕೊಳಲನೂದುವ
ಮನಸು ನಿಲ್ಲದೆ ನಡೀರೆ ಪೋಗೋಣ ಕೇಳಿ ನಾದವ ||೧||
ನಂದಸುತನು ವೃಂದಾವನದಿ ನಿಂದು ಕೊಳಲನು
ಚಂದದಿಂದಲಿ ಊದಿ ಕರೆವ ಇಂದು ಗೋವುಗಳ ||೨||
ಎಂಥ ರಾಗ ಮಾಡುವೋನು ಕಂತುಪಿತನು
ಅಂತರಂಗಕೆ ಸುಖವನಿತ್ತು ಭ್ರಾಂತಿಗೊಳಿಸುವ ||೩||
ಕಿರೀಟ ಕುಂಡಲ ಹಾರಪದಕ ಧರಿಸಿ ಕುಳಿತಿಹ
ಸರಸಿಜಾಕ್ಷಿಯರೆ ನೋಳ್ಪ ಜನಕೆ ಹರುಷ ಕೊಡುತಿಹ ||೪||
ಸಿರಿಯು ಬಂದು ಮುರಳಿಯಾಗಿ ಮರುಳು ಮಾಡುವನೆ
ಪರರಿಗಿಂಥ ಸುಖವುಂಟೆಂದು ಭ್ರಾಂತಿಗೊಳಿಸುವನೆ ||೫||
ಕುಂದ ಚಂಪಕ ಜಾಜಿ ಮಲ್ಲಿಗೆ ತಂದು ಮುಡಿಸಿದನೆ
ಇಂದಿರೇಶನು ಇಂದು ನಮ್ಮೊಳು ಸರಸವಾಡುವನೆ ||೬||
***
Kolalenu punyava madi
rangana balige bandite ||pa||
Nalina netreyara manasu
ella seledu podite ||a.pa||
Vanajanabhanu yamuneyalli kolalanuduva
manasu nillade nadire pogona keli nadava ||1||
Nandasutanu vrundavanadi nindu kolalanu
chandadindali udi kareva indu govugala ||2||
Entha raga maduvonu kantupitanu
antarangake sukhavanittu bhrantigolisuva ||3||
Kirita kundala harapadaka dharisi kulitiha
sarasijakshiyare nolpa janake harusha kodutiha ||4||
Siriyu bandu muraliyagi marulu maduvane
pararigintha sukhavuntendu bhrantigolisuvane ||5||
Kunda champaka jaji mallige tandu mudisidane
indireshanu indu nammolu sarasavaduvane ||6||
***
ಕೊಳಲೇನು ಪುಣ್ಯವ ಮಾಡಿ ರಂಗನ ಬಳಿಗೆ ಬಂದಿತೇ ಪ
ನಳಿನ ನೇತ್ರೆಯರ ಮನಸು ಎಲ್ಲಾ ಸೆಳೆದು ಪೋದೀತೇ ಅ.ಪ.
ವನಜನಾಭನು ಯಮುನೆಯಲ್ಲಿ ಕೊಳಲನೂದುವಮನಸು ನಿಲ್ಲದ ನಡೀರೆ ಪೋಗೋಣ ಕೇಳಿ ನಾದವ 1
ನಂದಸುತನು ವೃಂದಾವನದಿ ನಿಂದು ಕೊಳಲನುಚ್ಛಂದದಿಂದಲಿ ಊದಿ ಕರೆವ ಇಂದು ಗೋವುಗಳ 2
ಎಂಥ ರಾಗ ಮಾಡುವೋನು ಕಂತುಪಿತನುಅಂತರಂಗಕೆ ಸುಖವನಿತ್ತು ಭ್ರಾಂತಿಗೊಳಿಸುವ 3
ಕಿರೀಟ ಕುಂಡಲ ಹಾರಪದಕ ಧರಿಸಿ ಕುಳಿತಿಹಸರಸಿಜಾಕ್ಷಿಯರೆ ನೋಳ್ಪ ಜನಕೆ ಹರುಷ ಕೊಡುತಿಹ 4
ಸಿರಿಯು ಬಂದು ಮುರಳಿಯಾಗಿ ಮರುಳು ಮಾಡುವನೆಪರರಿಗಿಂಥ ಸುಖವುಂಟೆಂದು ಭ್ರಾಂತಿಗೊಳಿಸುವನೆ ] 5
ಕುಂದ ಚಂಪಕ ಜಾಜಿ ಮಲ್ಲಿಗೆ ತಂದು ಮುಡಿಸಿದನೆಇಂದಿರೇಶನು ಇಂದು ನಮ್ಮೊಳು ಸರಸವಾಡುವನೆ 6
****