ಶ್ರೀ ಮೋಹನದಾಸರ ಸ್ಮರಣೆ
ಮೋಹನದಾಸರ ಮನಸಾರ ನೆನೆದರೆಮರೆಯದೆ ಪೊರೆಯುವರು
ಕಾಮನ ಪಿತನ ದಯದಿ ಬೆಳೆದವರು ಆಮಹ ವಿಜಯದಾಸರ ಮುದ್ದು
ಕುವರರು||ಪಲ್ಲ||
ಚಕ್ರತೀರ್ಥದ ಬಳಿ ಅಸುನೀಗಲೆಂದು ಬಂದ
ತಾಯಿಯ ಕಂಡು ಅನುಗ್ರಹಿಸಿ
ಕರದಲ್ಲಿ ಮಗುವೆತ್ತಿ ಮೋಹನನೆಂದು ಕರೆಯತ್ತ
ಮಡದಿಗೆ ಕೊಟ್ಟರು ವಿಜಯ ದಾಸಾರ್ಯರು||೧||
ಎಣ್ಣೆ ನೀರನೆ ಹಾಕಿ ಬಿಸಿನೀರನೆರೆಯಲು
ಸಣ್ಣಕಾದ ದೇಹ ಚೇತರಿಸಿಕೊಂಡು
ಚಿರಂಜೀವಿಯಾಗೆಲೊ ಚಿಣ್ಣ ನೀನೆಂದ್ಹರಸಲು
ಕಣ್ಣಿಗಾನಂದ ನೀಡುತ ಬೆಳೆದರು||೨||
ಅಪಮೃತ್ಯು ಬಂದರೆ ಮೃತನಾಗಿಹನೆಂದು
ಪತಿತರುಅಲ್ಲಿ ಗುಮಿಗೂಡೆ
ಭೃಗುಋಷಿ ರೂಪದಿ ಯಮನಲ್ಲಿ ವಾದಿಸಿ
ಉಧ್ಧಾರ ಮಾಡಿದ ವಿಜಯದಾಸಾರ್ಯ||೩||
ವಿಜಯದಾಸರ ನೆನೆದು ಸಂತಸಪಡುತ
ಕೋಲಾಟದ ಪದಗಳ ಲೀಲೆಯಲಿ ರಚಿಸಿ
ಅವರ ಅನುಗ್ರಹದಿಂದ ಕುಲ ಕೋಟಿ ಉಧ್ಧಾರ
ಇನ್ನು ಜೀವಿಸುವರು ಇವರ ಪರಿವಾರ||೪||
ಪರಿ ಪರಿ ವಿಧವಾಗಿ ಗುರುಗಳ ನೆನೆದು
ಪರಮಾತ್ಮನಲಿ ಅತಿಭಕ್ತಿ ಮಾಡುತ್ತ
ಜ್ಯೇಷ್ಠ ಶುಕ್ಲ ಸಪ್ತಮಿ ದಿನದಿ
ಮಧ್ವೇಶಕೃಷ್ಣನ ಪಾದ ಸೇರಿದ||೫||
*******