ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಅವಧೂತ ಕಾವ ಕರುಣನೆ ಪೂರ್ಣ ನೀನೆ ಸದೋದಿತ ಪ
ಕರುಣ ದಯದ ಹುದಯ್ಯ ನೀಆಧಾರ ಶರಣ ಜನರಿಗಹುದಯ್ಯ ನೀಆಧಾರ ತಾರಿಸುವ ಸ್ವಾಮಿ ಅಹುದಯ್ಯ ನೀ ನಿರ್ಧಾರ ಪರಮ ದಯಾನಿಧಿ ನೀ ಸುಙÁ್ಞನದ ಸಾಗರ 1
ಅನಾಥನಾಥನಹುದೊ ಪೂರ್ಣ ದೀನಾನಾಥ ಸನಾಥ ಮಾಡುತಿಹ್ಯ ಶ್ರೀಸದ್ಗುರು ನೀ ಸಾಕ್ಷಾತ ಅನಾದಿ ನಿಜವಸ್ತು ಅಹುದಯ್ಯ ನೀ ಪ್ರಖ್ಯಾತ ಮುನಿ ಜನರಿಗೆ ನೀ ಆನಂದ ಸುಪಥ 2
ದೇಶಿಕರ ದೇವನಹುದಯ್ಯ ಕೃಪಾಕರ ಲೇಸು ಲೇಸಾಗೆನ್ನ ಪಾಲಿಸುವ ನೀ ದಾತಾರ ಭಾಸುತಿಹ ಭಾನುಕೋಟಿತೇಜ ಮನೋಹರ ದಾಸ ಮಹಿಪತಿ ಗುರು ನೀನೆ ಸಹಕಾರ 3
***