Showing posts with label ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ others. Show all posts
Showing posts with label ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ others. Show all posts

Friday, 27 December 2019

ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ others

ರಾಗ ಮುಖಾರಿ ಝಂಪೆ ತಾಳ

ಸಂಸಾರ ಸ್ಥಿರವೆಂದು ನಂಬದಿರು ವ್ಯರ್ಥ
ಕಂಸಾರಿ ಪಾದಭಜನೆಯ ಬಿಟ್ಟು ಬರಿದೆ||ಪ||

ಪಂಚ ಭೂತಾಂಶವೆಂಬ ದೇಹವಿದಕೆದ್ದಿ
ಪಂಚೇಂದ್ರಿಯಗಳ ವಿಷಯಗಳ ಸಹಿತಲು
ಪಂಚದ್ವಿಗುಣವು ಪರಣವಾಶ್ರಯದೊಳು ಕೂಡಿ
ಸಂಚರಿಸಿ ತೊಳಲುವುದಲ್ಲದೆ ಅನ್ಯವಿಹುದೆ ||೧||

ಅಷ್ಟರಾಗವು ಕರಣ ಅಷ್ಟವಿಷಯವು ಸಹಿತ
ಅಷ್ಟಕೊಂದನು ಕಡಮೆ ಧಾತುಗಳನು
ಶಿಷ್ಟನಾಡಿಯ ಮೂರು ದುಂಡೆಲು ಮೂರರಲಿ
ಚೇಷ್ಟಿಸುತ ಕೆಡುವುದಲ್ಲದೆ ಅನ್ಯವಿಹುದೆ ||೨||

ದೂಷಣ ತ್ರಿವಿಧ ಮತ್ತೀಷಣ ತ್ರಿವಿಧ ಗುಣ
ರಾಶಿ ತ್ರಿವಿಧಾವಸ್ಥೆಗಳನು ಮತ್ತೆ
ಈಷಣ*ತ್ರಯ ತಾಪಕೋಶಗಳನೈದಿದೀ
ನಾಶಿಸುವ ದೇಹವಲ್ಲದೆ ಬೇರಿರುದೆ ||೩||

ಮಾರುತ ಸಹಿತೊಂಬತ್ತಾರು ತತ್ವವು ಸಹಿತ
ತೋರುತ್ತಲಿಹ ಈ ಶರೀರದೊಳಗೆ
ಸಾರಾಂಶವಿದುವೆಂಬ ಸಾರಗಳನರಿತು ಸಂ-
ಸಾರ ಬಂಧನ ಬಿಟ್ಟು ಸ್ಥಿರ ಬಾಳು ಮನುಜ ||೪||

ಅಣುರೇಣು ತೃಣಕಾಷ್ಠ ಭರಿತನಾಗಿರುತಿರ್ಪ
ಚಿನುಮಯಾತ್ಮಕ ಭಕ್ತಜನ ರಕ್ಷಕ
ಅನುದಿನ ಸಲಹುವನು ಮನದಿ ಸ್ಮರಿಸಲು ಬಿಡದೆ
ಘನಮಹಿಮ ನಿತ್ಯಾತ್ಮ ಸಿರಿಯರಸ ನಮ್ಮ||೫||
********