Showing posts with label ಗುರುಗಳೆಂದರೆ ಇವರೆ vijaya vittala suladi ಪುರಂದರ ದಾಸ ಸ್ತೋತ್ರ ಸುಳಾದಿ GURUGALENDARE PURANDARA DASA STOTRA SULADI. Show all posts
Showing posts with label ಗುರುಗಳೆಂದರೆ ಇವರೆ vijaya vittala suladi ಪುರಂದರ ದಾಸ ಸ್ತೋತ್ರ ಸುಳಾದಿ GURUGALENDARE PURANDARA DASA STOTRA SULADI. Show all posts

Sunday, 8 December 2019

ಗುರುಗಳೆಂದರೆ ಇವರೆ vijaya vittala suladi ಪುರಂದರ ದಾಸ ಸ್ತೋತ್ರ ಸುಳಾದಿ GURUGALENDARE PURANDARA DASA STOTRA SULADI


Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ ಪುರಂದರ ದಾಸರ ಮೇಲೆ ಸುಳಾದಿ 
ಶ್ರೀ ಪುರಂದರದಾಸರ ಸ್ತೋತ್ರ ಸುಳಾದಿ 

 ರಾಗ ನಾಟ 

 ಧ್ರುವತಾಳ 

ಗುರುಗಳೆಂದರೆ ಇವರೆ ಗುರುಗಳು ಎನಗೆ ಕಾಣೊ
ಧರೆಯೊಳು ಪುರಂದರದಾಸರೆ ಗುರುಗಳು
ಮರಳೆ ಮತ್ತೊಬ್ಬರುಂಟೆ ಕರುಣಿಸಿ ನೆನೆದಂತೆ
ವರಗಳನಿತ್ತು ನಿತ್ಯ ಪರಿಪಾಲಿಸುವ ಹರಿ
ಮರುತನ್ನ ಲೀಲೆಗಳು ಹಿರಿದಾಗಿ ತಿಳಿಪಿ ವಿ -
ಸ್ತರವಾಗಿ ಎನ್ನಿಂದಾ ಬರೆಸಿದರು ಹರಿಯ ಚರಿತೆ
ದುರಿತ ಸಂದಣಿಯಲ್ಲಿ ಶೆರೆಬಿದ್ದು ತಪಿಸುತ -
ಲಿರೆ ನೋಡಿ ಪಾಲಿಸಿದರು ತಮ್ಮ ಕರುಣಾ
ಹರಿ ಯೆಳೆಮರಿ ತಾ ರುಕ್ಷನ ವದನದೊಳು
ಇರಲು ಶೆಳೆದು ಕಡಿಗೆ ತೆಗೆದಂತೆ ಇಂದೀಗ
ಗುರು ಶಿರೋಮಣಿ ಎನ್ನ ದುರಿತದಿಂದ ಸೆಳೆದು
ಪರಮಾರ್ಥದ ಮಾರ್ಗ ಅರಿಪು ಮಾಡೀ
ಕರುಣಾಸಾಗರ ನಮ್ಮ ವಿಜಯವಿಠ್ಠಲನ್ನ 
ಸ್ಮರಿಸುವದಕ್ಕೆ ಜ್ಞಾನವನ್ನೆ ತೋರಿದರೂ ॥ 1 ॥

 ಮಟ್ಟತಾಳ 

ಅಡವಿಗೆ ಬಿದ್ದವನ ದಾರಿಗೆ ತಂದಂತೆ
ಒಡಲಿಗೆ ಇಲ್ಲದವನ ಸುಧೆಯೊಳಗಿಟ್ಟಂತೆ
ಕೊಡೆ ಇಲ್ಲಾದವಗೆ ಸುರತರು ಒಲಿದಂತೆ
ನಡಿಯಲರಿಯದವಗೆ ನಡಿಗೆ ಕಲಿಸಿದಂತೆ
ನುಡಿಯಲರಿಯದವಗೆ ನಿಗಮ ತಿಳಿಸಿದಂತೆ
ಮಡುವಿನೊಳು ಬಿದ್ದವಗೆ ನಾವಿ ದೊರಕಿದಂತೆ
ಪೊಡವಿ ಎಡೆಯವಗೆ ಹರಿವಾಣ ದೊರಕಿದಂತೆ
ಮುಡಿಯ ಪೊತ್ತು ಪೋಪಗೆ ಊಟವು ಸಿಕ್ಕಿದಂತೆ
ಕಡುರೋಗಾದವಗೆ ಸಂಜೀವನದಂತೆ
ಜಡಮತಿ ನಾನಾಗಿ ಪೊಡವಿಯೊಳಗೆ ಭವದ
ಒಡನೊಡನೆ ನಿತ್ಯ ಎಡೆಬಿಡದೆ ಇರಲೂ
ಕೆಡಿಸುವ ಕಳ್ಳರ ನಡೆ ನುಡಿಯ
ತೊಡಕಿ ಸರ್ರನೆ ಕೈಪಿಡಿದು ಪರಿಪಾಲಿಸುವಂತೆ
ಮೃಡಬಾಂಧವನಾದ ವಿಜಯವಿಠ್ಠಲರೇಯನ 
ಅಡಿಗಳ ನಾಮವ ನುಡಿಸಿದರು ಒಲಿದೂ ॥ 2 ॥

 ತ್ರಿವಿಡಿತಾಳ 

ಏನು ಕರುಣಿಗಳೋ ಎಮ್ಮ ಗುರುಗಳು
ಏನು ಸ್ವಾಭಾವಿಕಾನಂದವು ತಿಳಿಯದೂ
ಮಾನವ ಯೋನಿಯಲ್ಲಿ ಬಂದು ಬಾಳುವ ಎನ್ನ
ಮೀನ ಉದಕದೊಳು ಇದ್ದಂತೆ ಮಾಳ್ಪರು
ಆನವರಿಗೆ ಲೇಶ ಅಧಿಕರ ಕಾಣೆನೊ
ಅನಂತ ಜನ್ಮವನು ಧರಿಸಿರಲು
ಈ ನಾಡಿನೊಳು ಎನಗೆ ಪ್ರಾಣಕೆ ಬಲು ಪರಿ
ಏನೇನು ದುರಿತಗಳು ಬಂದಟ್ಟಾಲು
ಮಾಣಗಳೆದು ಎನ್ನ ಮಾನಸದರ್ಪಣ -
ವನು ಇತ್ತರು ಮುದದಿಂದ ಕರುಣಿಸೀ
ಶ್ವಾನ ಛಳಿಯೊಳಿರೆ ವಜ್ರಕವಚವಾ
ಮೇಣು ದೊರತದ್ದು ನೋಡು ಎನ್ನ ಭಾಗ್ಯ
ನಾನಾರಿಗಂಜೆನೊ ವಿಜಯವಿಠ್ಠಲರೇಯನ 
ಧ್ಯಾನವ ಮಾಳ್ಪಂಥ ಜ್ಞಾನಿಗಳನು ಕಂಡೆ ॥ 3 ॥

 ಅಟ್ಟತಾಳ 

ಗಾನ ಮಾಡಿದರೇನು ಧ್ಯಾನ ಮಾಡಿದರೇನೊ
ಕಾನನದೊಳು ಪೋಗಿ ತಪವ ಮಾಡಲೇನು
ಮಾನವನು ಪವಮಾನ ಮತವ ನಂಬಿ
ಜ್ಞಾನ ಉಪದೇಶವಾಗದಲೆ
ತಾನು ಏಸುಕಾಲ ಬದುಕಿದ ಫಲವೇನು
ಬಾಣವಿಲ್ಲದ ಬಿಲ್ಲಿನಂತೆ ಕಾಣೊ
ಮಾನವಂತರಾದ ಗುರುಗಳ ಉಪದೇಶ -
ವಾನು ಪಡೆದರೆ ಸ್ನಾನಾದಿಯಾ ವ್ಯಾಪಾರವೇನು
ವಾಣೀಪತಿಯ ಜನಕ ವಿಜಯವಿಠ್ಠಲರೇಯಾ 
ತಾನಾಗಿ ಒಲಿವಾ ಗುರುಭಕ್ತಿ ಉಳ್ಳವಂಗೆ ॥ 4 ॥

 ಆದಿತಾಳ 

ಏಸು ಬಲವಿದ್ದರೇನು ತನ್ನ ಗುರುಗಳ ಬಲ
ಲೇಸಾಗಿ ಇಲ್ಲದಿರೆ ಒಂದು ಫಲನೀಯವೊ
ದೇಶದೊಳುಳ್ಳವರ ಲೇಸು ತಪ್ಪಿದರೇನು
ದೋಷವರ್ಜಿತರಾದ ಗುರುಗಳ ದಯವಿರೆ
ಮೋಸವೆಂಬೋದೆಂದಿಗಿಲ್ಲ ದಿನಪ್ರತಿದಿನ ಬಿಡದೆ
ಈಶಾನುಗ್ರಹ ಉಂಟು ಸಿದ್ದಾರ್ಥವೆನ್ನಿರೋ
ಕಾಶಿ ಮೊದಲಾದ ಸರ್ವಯಾತ್ರಿ ತೀರ್ಥ ಮಿಂದು
ರಾಶಿ ಹಣ ಕೂಡಿಸಿ ದಾನವಿತ್ತರನೇಕ ಸಮಾನವಲ್ಲ 
ಸುಲಭಾ ಸುಲಭಾ ಗುರುಗಳ ಸ್ಮರಣೆಗೆ ಸರಿಯುಂಟೆ
ಕ್ಲೇಶಬಡದೆ ನಿತ್ಯ ಶುದ್ಧಮನದಿ ನಂಬಿರೊ
ದಾಸರ ಪ್ರೀಯ ನಮ್ಮ ವಿಜಯವಿಠ್ಠಲರೇಯಾ 
ಲೇಸು ತೋರಿಸುವ ಬಿಡದೆ ಇನಿತು ನಡೆದವಗೆ ॥ 5 ॥

 ಜತೆ 

ಗುರು ಪುರಂದರದಾಸರ ನೆರೆ ನಂಬಲು
ನಿರುತ ಕಲಿತು ವಿಜಯವಿಠ್ಠಲ ಒಲಿವಾ ॥
**************

On Purandara dasa sulaadi by vijaya dasa



ಧ್ರುವತಾಳ
ಗುರುಗಳೆಂದರೆ ಇವರೆ ಗುರುಗಳು ಎನಗೆ ಕಾಣೊ
ಧರೆಯೊಳು ಪುರಂದರದಾಸರೆ ಗುರುಗಳು
ಮರಳೆ ಮತ್ತೊಬ್ಬರುಂಟೆ ಕರುಣಿಸಿ ನೆನೆದಂತೆ
ವರಗಳ ಇತ್ತು ನಿತ್ಯ ಪರಿಪಾಲಿಸುವೆ ಹರಿ
ಮರುತನ್ನ ಲೀಲೆಗಳು ಹಿರಿದಾಗಿ ತಿಳಿಪಿ ವಿ
ಸ್ತರವಾಗಿ ಎನ್ನಿಂದಾ ಬರೆಸಿದರು ಹರಿಚರಿತೆ
ದುರಿತ ಸಂದಣಿಯಲ್ಲಿ ಶೆರೆಬಿದ್ದು ತಪಿಸುತ
ಲಿರೆ ನೋಡಿ ಲಾಲಿಸಿದರು ತಮ್ಮ ಕರುಣದಿಂದ
ಹರಿಯೆಳೆಮರಿ ತರಕ್ಷುವಿನ ವನದೊಳು
ಇರಲು ಸೆಳದು ಕಡಿಗೆ ತೆಗೆದಂತೆ ಇಂದಿಗಾ
ಗುರು ಶಿರೋಮಣಿ ಎನ್ನ ದುರಿತದಿಂದ ಸೆಳೆದು
ಪರಮಾರ್ಥದ ಮಾರ್ಗ ಅರಪುಮಾಡೀ
ಕರುಣಾಸಾಗರ ನಮ್ಮ ವಿಜಯ ವಿಠ್ಠಲನ್ನ
ಸ್ಮರಿಸುವುದಕೆ ಸುಜ್ಞಾನ ವನ್ನೆ ತೋರಿದರೂ ||1||

ಮಟ್ಟತಾಳ
ಅಡವಿಗೆ ಬಿದ್ದವನ ದಾರಿಗೆ ತಂದಂತೆ
ಒಡಲಿಗೆ ಇಲ್ಲದವನ ಸುಧೆಯೊಳಗಿಟ್ಟಂತೆ
ಕೊಡೆ ಇಲ್ಲಾದವಗೆ ಸುರತರು ಒಲಿದಂತೆ
ನಡಿಯಲರಿಯದವಗೆ ನಡಿಯ ಕಲಿಸಿದಂತೆ
ನುಡಿಯಲರಿಯದವಗೆ ನಿಗಮತಿಳಿಸಿದಂತೆ
ಮಡುವಿನೊಳು ಬಿದ್ದವಗೆ ನಾವಿದೊರಕಿದಂತೆ
ಪೊಡವಿ ಎಡೆಯವಗೆ ಹರಿವಾಣ ದೊರೆತಂತೆ
ಮುಡಿಯಪೊತ್ತು ಪೋಪಗೆ ಊಟವು ಸಿಕ್ಕಿದಂತೆ
ಕಡುರೋಗಾದವಗೆ ಸಂಜೀವನದಂತೆ
ಜಡಮತಿ ನಾನಾಗಿ ಪೊಡವಿಯೊಳಗೆ ಭವದ
ಒಡನೊಡನೆ ನಿತ್ಯ ಎಡೆಬಿಡದೆ ಇರಲೂ
ಕೆಡಿಸುವ ಕಳ್ಳರ ನಡುಪಿ ನುಡಿಯಾ
ತೊಡಕಿಸದಾನೆ ಕೈಪಿಡಿದು ಪಾಲಿಸುವಂತೆ
ಮೃಢಬಾಂಧವನಾದ ವಿಜಯ ವಿಠ್ಠಲರೇಯನ
ಅಡಿಗಳ ನಾಮವನು ನುಡಿಸಿದರು ಒಲಿದೂ ||2||

ತ್ರಿವಿಡಿತಾಳ
ಏನು ಕರುಣಿಗಳೋ ಎಮ್ಮಾ ಗುರುಗಳು
ಏನು ಸ್ವಾಭಾವಿತಾನಂದವು ತಿಳಿಯದೂ
ಮಾನವ ಯೋನಿಯಲ್ಲಿ ಬಂದು ಬಾಳುವ ಎನ್ನಾ
ಮೀನು ಉದಕದೊಳಗಿದ್ದಂತೆ ಮಾಳ್ಪರು
ಆನವರಿಗೆ ಲೇಶ ಅಧಿಕರ ಕಾಣೆನೊ
ಅನಂತ ಜನ್ಮವ ಧರಿಸಲು
ಈ ನಾಡಿನೊಳು ಎನಗೆ ಪ್ರಾಣಕೆ ಬಲುಪರಿ
ಏನೇನು ದುರಿತಗಳು ಬಂದಟ್ಟಲೂ
ಮಾಣಗಳದು ಎನ್ನಾ ಮಾನಸದರ್ಪಣ
ವನು ಇತ್ತರು ಮುದದಿಂದ ಕರುಣಿಸೀ
ಶ್ವಾನ ಛಳಿಯೊಳಿರೆ ವಜ್ರಕವಚವನ್ನು
ಮೇಣು ದೊರತದ್ದು ನೋಡು ಎನ್ನಾಭಾಗ್ಯಾ
ನಾನಾರಿಗಂಜೆನೊ ವಿಜಯ ವಿಠ್ಠಲರೇಯಾ
ಧ್ಯಾನವನು ಮಾಳ್ಪಂಥ ಸುಜ್ಞಾನಿಗಳನು ಕಂq ||3||

ಅಟ್ಟತಾಳ
ಗಾನ ಮಾಡಿದರೇನು, ಧ್ಯಾನ ಮಾಡಿದರೇನೊ
ಕಾನನದೊಳು ಪೋಗಿ ತಪವ ಸೇರಾಲೇನು
ಮಾನವನು ಪವಮಾನ ಮತವ ನಂಬಿ
ಸುಜ್ಞಾನ ಉಪದೇಶವಾಗದಲೆ
ತಾನು ಏಸುಕಾಲ ಬದುಕಿದ ಫಲವೇನು
ಬಾಣ ಇಲ್ಲದ ಬಿಲ್ಲಿನಂತೆ ಕಾಣೊ
ಮಾನವಂತರಾದ ಗುರುಗಳ ಉಪದೇಶ
ವನು ಪಡೆದರೆ ಸ್ನಾನಾದಿ ವ್ಯಾಪಾರವೇನು
ವಾಣೀಪತಿ ಜನಕ ವಿಜಯ ವಿಠ್ಠಲರೇಯಾ
ತಾನಾಗಿ ಒಲಿವಾ ಗುರುಭಕ್ತಿ ಉಳ್ಳವಂಗೆ ||4||

ಆದಿತಾಳ
ಏಸುಬಲ ಇದ್ದರೇನು, ತನ್ನ ಗುರುಗಳ ಬಲಾ
ಲೇಸಾಗಿ ಇಲ್ಲದಿರೆ ಒಂದು ಫಲನೀಯವೊ
ದೇಶದೊಳಗೆ ಉಳ್ಳವರು ಲೇಸು ತಪ್ಪಿದರೇನೊ
ದೋಷವರ್ಜಿತರಾದ ಗುರುಗಳ ದಯವಿರೆ
ಮೋಸವೆಂಬೋದೆಂದಿಗಿಲ್ಲ ದಿನಪ್ರತಿದಿನ ಬಿಡದೆ
ಈಶಾನುಗ್ರಹ ಉಂಟು ಸಿದ್ದಾರ್ಥವೆನ್ನಿರೋ
ಕಾಶಿ ಮೊದಲಾದ ಸರ್ವಯಾತ್ರಿ ತೀರಥಾ ಮಿಂದು
ರಾಶಿ ಹಣ ಕೂಡಿಸಿ ದಾನವಿತ್ತರನೇಕಾ ಸಮಾನವಲ್ಲ ಸುಲ
ಭಾ ಸುಲಭ ಗುರುಗಳ ಸ್ಮರಣೆಗೆ ಸರಿ ಉಂಟೆ
ಕ್ಲೇಶಬಡದೆ ನಿತ್ಯ ಶುದ್ಧಮನದಿ ನಂಬಿರೊ
ದಾಸರ ಪ್ರೀಯ ನಮ್ಮ ವಿಜಯ ವಿಠ್ಠಲರೇಯಾ
ಲೇಸು ತೋರಿಸುವ ಬಿಡದೆ ಇನಿತು ನಡೆದವಗೆ||5||

ಜತೆ
ಗುರು ಪುರಂದರದಾಸರ ನೆರೆ ನಂಬಲೂ
ನಿರುತ ಕಲಿತು ವಿಜಯ ವಿಠ್ಠಲ ಒಲಿವಾ||6||
**********