Showing posts with label ಅಂದಣೇರಿದ ವರದೇಂದ್ರ ಮುನಿಪರ ನಿಂದು ಪಾಡುವರಫವೃಂದ ತರಿವರ varadesha vittala varadendra teertha stutih. Show all posts
Showing posts with label ಅಂದಣೇರಿದ ವರದೇಂದ್ರ ಮುನಿಪರ ನಿಂದು ಪಾಡುವರಫವೃಂದ ತರಿವರ varadesha vittala varadendra teertha stutih. Show all posts

Sunday, 1 August 2021

ಅಂದಣೇರಿದ ವರದೇಂದ್ರ ಮುನಿಪರ ನಿಂದು ಪಾಡುವರಫವೃಂದ ತರಿವರ ankita varadesha vittala varadendra teertha stutih

 ..

kruti by ವರದೇಶ ವಿಠಲರು varadesha vittala dasaru

ಶ್ರೀ ಗುರುವರದೇಂದ್ರರ ಸ್ತೋತ್ರಗಳು


ಅಂದಣೇರಿದ ವರದೇಂದ್ರ ಮುನಿಪರ

ನಿಂದು ಪಾಡುವರಫವೃಂದ ತರಿವರ ಪ


ಅಂದದಿ ಭೂಸುರ ಸಂದಣಿ ಮಧ್ಯದಿ

ಚಂದದಿ ಬಹು ಕರ್ಮಂದಿಗಳರಸ ಅ.ಪ


ಶ್ರೀ ಮಧ್ವಮತಾಂಬುಧಿ ಸೋಮ ನಿಷ್ಕಾಮ

ತಾಮಸಮತಕÀಂಜಸ್ತೋಮ ನಿಧೂಮ

ಆ ಮಹಾಭಕ್ತ ಕುಮುದ ಪ್ರೇಮ ಸತ್ಕಾಮ

ಕಾಮಿತ ಕಲ್ಪದ್ರುಮಗುರುಸಾರ್ವಭೌಮ

ರಾಮ ಪದಾಂಬುಜ ಪ್ರೇಮದಿ ಭಜಿಸುವ

ಭೂಮಿಸುರರ ಹೃತ್ತಾಮಸಹಾರಾ 1


ಉದಿತಾಕರ್À ಸಂಕಾಶ ವಿಧಿಕುಲಾಧೀಶ

ಮುದದಿ ಭಜಿಸುವ ಭಕ್ತಹೃದಯನಿವಾಸ

ಸದಮಲಭಕ್ತಜ್ಞಾನ ಉದಜವಿಕಾಸ

ವಿಧಿಕುಲದ್ವೇಷಿ ಕುಮುದ ತತಿನಾಶ

ವಿಧವಿಧದಲಿ ಹರಿಪದ ಭಜಿಸುವ ಮತಿ

ವದಗಿ ಪಾಲಿಸು ಹೃದಜನಸದಯಾ 2


ಕರುಣಾನಿಧಿಯೆ ನಿನ್ನ ಚರಣ ಸೇವಕರ

ಜರಮರಣಾದಿ ದೋಷತ್ವರಿತ ಪರಿಹಾರ

ಮರುತಮತದ ತತ್ವ ಶರಧಿ ವಿಹಾರ

ನಿರುತದಿ ಹರಿಯನಾಮ ಸ್ಮರಿಸುವಧೀರ

ವರದೇಶ ವಿಠಲನ ಕರುಣದಿ ಧರೆಯೊಳು

ಮೆರೆಯುವ ಯತಿಕುಲವರಿಯ ಸುಚರಿಯಾ 3

***