Showing posts with label ಹರಿಯೇ ಸರ್ವೋತ್ತಮ ಹರಿಯೆ ಪರದೈವತ purandara vittala. Show all posts
Showing posts with label ಹರಿಯೇ ಸರ್ವೋತ್ತಮ ಹರಿಯೆ ಪರದೈವತ purandara vittala. Show all posts

Saturday, 7 December 2019

ಹರಿಯೇ ಸರ್ವೋತ್ತಮ ಹರಿಯೆ ಪರದೈವತ purandara vittala

ಪುರಂದರದಾಸರು
ರಾಗ ಸಾವೇರಿ. ಝಂಪೆ ತಾಳ)

ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ ||ಪ||

ಹರಿಯಲ್ಲದನ್ಯತ್ರ ದೈವಗಳುಂಟೆಂದು
ಉರಗನ ಮುಂಡಿಗೆಯ ಯಾರಾದರೆತ್ತಲಿ ||ಅ ||

ವಿಶ್ವತಶ್ಚಕ್ಷು ನೀನೇ ವಿಶ್ವತೋಮುಖ ನೀನೇ
ವಿಶ್ವತೋಬಾಹು ವಿಶ್ವದುದರ ನೀನೇ
ವಿಶ್ವವ್ಯಾಪಕ ವಿಶ್ವಸೂತ್ರಧರ ನೀನೇ
ವಿಶ್ವನಾಟಕ ಶ್ರೀವಿಷ್ಣುವೇ ನಮೋ ನಮೋ ||

ಜಗಂಗಳ ಸೃಜಿಸುವ ಬೊಮ್ಮ ನಿನ್ನ ಮಗ
ಜಗಂಗಳ ಪಾವನೆ ನಿನ್ನ ಸುತೆ
ಜಗಂಗಳ ಜೀವನಿ ರಾಣಿ ಮಹಾಲಕ್ಷ್ಮಿ
ಜಗವ ಮೋಹಿಸುತಿರ್ಪ ಮಾಯೆ ಮನೆಯ ತೊತ್ತು ||

ಆಗಮ ನಿಗಮ ಪುರಾಣ ಶಾಸ್ತ್ರಂಗಳಲ್ಲಿ
ಯೋಗಿಗಳರಸಿ ನಿಮ್ಮ ಕಾಣದಿಪ್ಪರೊ
ನಾಗಶಯನ ಭುಜಂಗ ಭೂಷಣವಂದಿತ
ಭಾಗವತಪ್ರಿಯ ಪುರಂದರವಿಠಲ ||
********


ಹರಿಯೇ ಸರ್ವೋತ್ತಮ ಹರಿಯೆ ಪರದೇವತೆ
ಹರಿ ಸರ್ವ ವಿಶ್ವಮಯಂ ಜಗತು ||ಪ||
ಹರಿಯಲ್ಲದನ್ಯತ್ರ ದೈವಗಳಿಲ್ಲವೆಂದು
ಉರಗನ ಹೆಡೆಯನ್ನು ಪಿಡಿದು ಹೇಳುವೆನಯ್ಯ ||ಅ ||

ಜಗಂಗಳ ಪುಟ್ಟಿಸುವ ಬ್ರಹ್ಮ ನಿನ್ನ ಮಗ
ಜಗವ ಸಂಹರಿಸುವ ರುದ್ರ ಮೊಮ್ಮಗನು
ಜಗದ ಪಾವನೆ ಭಾಗೀರಥಿ ನಿನ್ನ ಮಗಳಯ್ಯ
ಜಗದ ಜೀವದ ಮಾತೆ ನಿನ್ನರಸಿಯೊ ದೇವ ||

ವಿಶ್ವತೋಮುಖ ನೀನೇ ವಿಶ್ವತಶ್ಚಕ್ಷು ನೀನೇ
ವಿಶ್ವತೋಬಾಹು ವಿಶ್ವಪಾದನು ನೀನೆ
ವಿಶ್ವವುದರ ನೀನೇ ವಿಶ್ವವ್ಯಾಪಕ ನೀನೆ
ವಿಶ್ವನಾಟಕ ಸೂತ್ರಧಾರಿಯೆ ವಿಷ್ಣುವೆ ||

ಆಗಮ ನಿಗಮ ಪುರಾಣಗಳೆಲ್ಲವು
ಯೋಗಿಜನ ಪೊಗಳುತ್ತಿರೆ
ನಾಗಶಯನ ಭೋಗಿಭೂಷಣವಂದಿತ
ಭಾಗವತರ ಪ್ರಿಯ ಪುರಂದರವಿಠಲ ||
***


pallavi

hariyE sarvOttama hariye para dEvate hariyalladanyatra daivagaLuNTendu uragana muNDigen yArAdarettali

caraNam 1

vishvadash-cakSu nInE vishvatOmukha nInE vishvatO bAhu vishvadudara nInE
vishva vyApaka vishva sUtradhara nInE vishva nATaka shrI viSNuvE namO namO

caraNam 2

jagangaLa srujisuva bomma ninna maga jagangaLa pAvane ninna sute
jagangala jIvani rANi mahAlakSmi jagava mOhisudirpa mAye maneya tottu

caraNam 3

Agama nigama purANa shAstrangaLalli yOgigaLarasi nimma kANadipparo
nAgashayana bhujanga bhUSaNa vandita bhAgavata priya purandara viTTala
***

ಹರಿಯೇ ಸರ್ವೋತ್ತಮ ಹರಿಯೆ ಪರದೈವತ |
ಹರಿಯೆ ಸರ್ವಂ ವಿಷ್ಣುಮಯಂ ಜಗತು ಪ.

ಹರಿಯಲ್ಲದನ್ಯತ್ರ ದೈವಗಳುಂಟೆಂದು |ಉರುಗನ ಮುಡಿಯನಾರಾದರೆತ್ತಲಿ ಅಪ

ಜಗಂಗಳ ಪುಟ್ಟಿಸುವಬೊಮ್ಮ ನಿನ್ನ ಮಗ |ಜಗದ ಸಂಹಾರಕ ನಿನ್ನ ಮೊಮ್ಮಗನು ||ಜಗದ ಪಾವನೆ ಭಾಗೀರಥಿ ನಿನ್ನ ಮಗಳು |ಜಗದ ಜೀವನಮಾತೆ ನಿನ್ನರಸಿಯಲೆ ದೇವ 1

ವಿಶ್ವತೋಮುಖ ನೀನೆ, ವಿಶ್ವತಶ್ಚಕ್ಷು ನೀನೆ |ವಿಶ್ವತೋಬಾಹುವಿಶ್ವ ಉದರ ನೀನೆ ||ವಿಶ್ವವ್ಯಾಪಾರ ವಿಶ್ವಸೂತ್ರಧಾರಕ ನೀನೆ |ವಿಶ್ವನಾಟಕ ವಿಶ್ವವಿಷ್ಣುವೇ ನಮೋ ನಮೋ 2

ಆಗಮನಿಗಮ ಪೌರಾಣ ಶಾಸ್ತ್ರಂಗಳಿಗೆ |ಯೋಗಿಜನಕಗಮ್ಯಮೂರ್ತಿ ನೀನೆ ||ನಾಗಶಯನಸಿರಿ ಭೋಗಿಭೂಷಣವಿನುತ |ಭಾಗವತರ ಪ್ರಿಯ ಪುರಂದರವಿಠಲ 3