Showing posts with label ತಾಂಡವಾಡು ತಾಂಡವಾಡು ತಾಂಡವಾಡು ಶ್ರೀ ಕೃಷ್ಣವಿಠಲ krishnavittala. Show all posts
Showing posts with label ತಾಂಡವಾಡು ತಾಂಡವಾಡು ತಾಂಡವಾಡು ಶ್ರೀ ಕೃಷ್ಣವಿಠಲ krishnavittala. Show all posts

Monday, 2 August 2021

ತಾಂಡವಾಡು ತಾಂಡವಾಡು ತಾಂಡವಾಡು ಶ್ರೀ ಕೃಷ್ಣವಿಠಲ ankita krishnavittala

ತಾಂಡವಾಡು ತಾಂಡವಾಡು ತಾಂಡವಾಡು ಶ್ರೀ ಕೃಷ್ಣವಿಠಲ ಪ


ತೊಂಡನಾನು_ ತೊಂಡನಾನು_

ತುಂಡುಮಾಡು ಭಂಡ ಭವವ ಅ.ಪ.


ಅಂದು ಇಂದು ಎಂದು ಏನು _ ಹಿಂದು ಮುಂದು

ಒಂದು ಅರಿಯೆ

ಇಂದಿರೇಶ ನಂದದಿಂದ ಮುಂದೆ ಬಂದು ಛಂದ ದಿಂದ 1


ಹಾಗೋ ಹೀಗೋ _ ಹ್ಯಾಗೋ ಕಾಣೆ _ ಕೂಗಿ ಕೂಗಿ

ಬಾಗಿ ಬಾಗುವೆ

ಯಾಗ _ ಯೋಗ _ ಭೋಗ ಮುಕ್ತಿ ಎಲ್ಲ ನೀನೆ ಬೇಗ ಸಾಗಿ2


ದೋಷ ದೂರ _ ವಾಸುದೇವ _ ಶ್ರೀ ಕೃಷ್ಣವಿಠ್ಠಲ ನಿತ್ಯ

ದೋಷಿಯಾದರೇನು ನಾನು ಶ್ವಾಸ ಶಿಷ್ಯ _ ನಿತ್ಯಭೃತ್ಯ 3

*****