Showing posts with label ಪಾಲಿಸು ಲೋಕಾ ಪಾಲ ಶ್ರೀಲೋಲಾ govinda. Show all posts
Showing posts with label ಪಾಲಿಸು ಲೋಕಾ ಪಾಲ ಶ್ರೀಲೋಲಾ govinda. Show all posts

Wednesday, 13 November 2019

ಪಾಲಿಸು ಲೋಕಾ ಪಾಲ ಶ್ರೀಲೋಲಾ ankita goivinda

by ಗೋವಿಂದದಾಸ
ಪಾಲಿಸು ಲೋಕಾ | ಪಾಲ ಶ್ರೀಲೋಲಾ |ಪಾಲಯಾಚ್ಯುತ ವನಮಾಲ ಗೋಪಾಲಾ ಪ

ಅಗಣಿತಮಹಿಮಾ | ಆಶ್ರಿತದಾತಾ |ಆಘಹರನಗಧರ| ಆತ್ಮಾಭಿರಾಮಾ 1

ಶಾಂತ ಸ್ವರೂಪಾ | ನಿಶ್ಚಿಂತ ನಿರಾಮಯ |ಅಂತ್ಯರಹಿತ | ರಮಾಕಾಂತ ಪ್ರಖ್ಯಾತಾ 2

ನಂದನ ನಂದಾ | ನಂದ ಮುಕುಂದಾ |ಸುಂದರಮೂರ್ತಿ|ಗೋವಿಂದದಾಸನ ವಂದ್ಯ 3
*******