Showing posts with label ಸತ್ಯನಾರಾಯಣನ ಪಾದ ಭಕ್ತಿಯಿಂದ ಭಜಿಸು ಮನವೆ narahari P SATYANARAYANANA PAADA BHAKTIYINDA BHAJISU MANAVE. Show all posts
Showing posts with label ಸತ್ಯನಾರಾಯಣನ ಪಾದ ಭಕ್ತಿಯಿಂದ ಭಜಿಸು ಮನವೆ narahari P SATYANARAYANANA PAADA BHAKTIYINDA BHAJISU MANAVE. Show all posts

Saturday, 11 December 2021

ಸತ್ಯನಾರಾಯಣನ ಪಾದ ಭಕ್ತಿಯಿಂದ ಭಜಿಸು ಮನವೆ ankita narahari P SATYANARAYANANA PAADA BHAKTIYINDA BHAJISU MANAVE

kruti by pradyumna teertha ಪ್ರದ್ಯುಮ್ನತೀರ್ಥರು

ಸತ್ಯನಾರಾಯಣನ ಪಾದ ಭಕ್ತಿಯಿಂದ ಭಜಿಸು ಮನವೆ

ಅರ್ಥಿಯಿಂದ ಪೂಜಿಪರಿಗೆ ವಿತ್ತಾದಿಗಳಿತ್ತು ಕಾಯ್ವ ಪ

ಹಿಂದೆ ನಾರದರಿಂದಿರೇಶಗೆ ವಂದಿಸಿ ಬೆಸಗೊಳಲು

ಛಂದದಿಂದಲಿ ಸಿಂಧುಶಯನ ಬಂಧಮೋಚಕವೆಂದು ಪೇಳಿದ 1

ತಿಳಿದು ನಾರದರಿಳೆಯೊಳರುಹೇ ಕಲಿತು ಜನಗಳಲ್ಲಾರಂಭಾ

ಫಲ ಗೋಧುಮಚೂರ್ಣ ಶರ್ಕರ

ಪಾಲು ಘೃತಾದಿಗಳಿಂದ ಪೂಜಿತ 2

ದ್ವಿಜವಣಿಕ್ ಭೂಭುಜರು ನಿಜಭಕುತಿಯಿಂದ ಯ್ಯಜಿಸೆ

ಕುಜನಮರ್ಧನ ಶ್ರೀ ನರಹರಿ

ಸೋಜಿಗವನ್ನೇ ತೋರಿದುದರಿಯ 3

***