Showing posts with label ಕರುಣಿಸು ನರಹರಿಯೇ ಸ್ಮರಣಿಯ ಕರುಣಿಸು ನರಹರಿಯೇ karpara narahari. Show all posts
Showing posts with label ಕರುಣಿಸು ನರಹರಿಯೇ ಸ್ಮರಣಿಯ ಕರುಣಿಸು ನರಹರಿಯೇ karpara narahari. Show all posts

Monday, 2 August 2021

ಕರುಣಿಸು ನರಹರಿಯೇ ಸ್ಮರಣಿಯ ಕರುಣಿಸು ನರಹರಿಯೇ ankita karpara narahari

ಕರುಣಿಸು ನರಹರಿಯೇ ಸ್ಮರಣಿಯ

ಕರುಣಿಸು ನರಹರಿಯೇ ಪ

ಕರುಣಿಸುವದು ತವಸ್ಮರಣೆ ನಿರಂತರ

ಧರಣಿ ಸುರಪ್ರಿಯ ಚರಣಕೆರಗುವೆನು ಅ.ಪ


ಶರಣರ ಸುರತರುವೇ ಕರುಣಾ

ಶರಧಿ ಶಿರಿಯಧೊರೆಯೆ

ಸರಸಿಜ ಭವಮುಖರರಸನೆ ತವಪದ

ಸರಸಿಜದಲಿ ಮನವಿರಿಸುವಂತೆ ಜವ 1


ಕಂದನನುಡಿಕೇಳಿ ಸ್ತಂಭದಿ

ಬಂದಿಯೊ ವೇಗದಲಿ

ವಂದಿಸುವೆನು ಭವಬಂಧ ಬಿಡಿಸಿ ಮನ

ಮಂದಿರದಲಿ ತವ ಸಂದರುಶನವನು 2


ಚಾರು ಕೃಷ್ಣ ತೀರಾಕಾರ್ಪರಾ

ಗಾರನೆ ಸ್ಮರಿಸುವರ

ಘೋರದುರಿತ ಹರನಾರಸಿಂಹ ನಿ

ನ್ನಾರಧಕರೊಳು ಸೇರಿ ಸುಖಿಸುವಂತೆ 3

****