ವಿಠಲಯ್ಯ ವಿಠಲಯ್ಯ
ವಿಟ್ಠಲಯ್ಯ ವಿಟ್ಠಲಯ್ಯ ll ಪ ll
ಧಿಟನಿಹೆ ನಿ l ಷ್ಕುಟಿಲ ಗುರು ಗೋವಿಂದ ll ಅ ಪ ll
ಜಿಗಿದು ಜಲದಿ ನಗ ಮಂದರ ನೆಗಹುತ
ವಿಗಡಾಸುರ ಹಯಮೊಗನನ ಕಡಿದೆ ll 1 ll
ಪಟುತರ ನರಮೃಗ l ವಟು ವೇಷದಿ ನಿನ್
ಎಟಪದದಂಗುಟ ಸುರ l ತಟನಿಗೆ ಕಾರಣ ll 2 ll
ನೃಪಕುಲ ಛೇದನ l ವಿಪಿನದಿ ಶಬರಿಯ
ಸುಫಲವ ಮೆ l ದ್ದಪವರ್ಗವನಿತ್ತೆ ll 3 ll
ಕ್ರೂರರ ತರಿದು l ವರ ಸತಿಯರ ವ್ರತ
ನೆರೆ ಅಳಿಸುತ ತಾ l ತುರಗವನೇರ್ದಾ ll 4 ll
ಭಾವದಿ ಮೈಮರೆ l ದಾವನು ತವಪದ
ಸೇವಿಸೆ ಸಲಹುವಿ l ಗುರುಗೋವಿಂದ ll 5 ll
***