Showing posts with label ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ vijaya vittala. Show all posts
Showing posts with label ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ vijaya vittala. Show all posts

Thursday, 17 October 2019

ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ ankita vijaya vittala

ವಿಜಯದಾಸ
ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ
ಮಾಡು ಕರುಣವ ಫಲದಾಯ ಪ

ಯತಿರತುನತಿ ದಶಮತಿ ಮತದಲಿ ಸ
ನ್ನತಿ ಹಿತ ಭಕುತಿಲಿ ಪ್ರತಿದಿನ ಸ
ಪಥ ಚತುರತೆ ತತುವೇಷ ತತಿಸಮ್ಮತ
ಹಿತವಾಗಿಪ್ಪ ಸುಖಮತಿಯನೀಯೋ 1

ಬಲಬಲ ಬಲರಿಪು ವೊಲಿದೊಲಿದು ಗಿರಿಯಲಿ
ಬಲುವೊಲಿಮೆಲಿ ವೊಲಿಸಬಾರದೇ
ಕಳವಳಿಸಲು ಬಲಗುಂದಿ ನಲವು ನಿ
ಶ್ಚಲವಾಗಿ ಬಲವಾಗಿ ಗಿರಿಯೆಳದೆಲೊ ಸಲಹಿದಿ 2

ತ್ರಿಜಗವೀರ ಧ್ವಜ ಸುಜನರ ನಿಜಪದ
ರಜರಜವಾದರು ಭಜಿಸುವ ಸರ್ವದ
ವ್ರಜಗಳ ಸಂಗ ದ್ವಿಜನರವಿ ಈ ಮತದಿ
ಸಿರಿ ವಿಜಯವಿಠ್ಠಲರೇಯಾ 3
*********