..
ಯಾದವೇಂದ್ರ ಪರಿಮೋದವ ಸೂಸುತ ಹಾದಿಯ ಹಿಡಿದಾನು ತಾಗುಣ ಸಾಂದ್ರ ಯಾದವೇಂದ್ರ ಪ.
ಛತ್ರ ಚಾಮರದವರು ಜತ್ತಾಗಿ ನಡೆದರುಚಿತ್ತಜನೈಯನ ಹತ್ತಿರ ಕೆಲರು1
ಆನೆ ಅಂಬಾರಿಯವರು ಶ್ರೀನಿವಾಸನ ಮುಂದೆ ನಾನಾ ಭೂಷಿತರಾಗಿ ಮಾನದಿ ತೆರಳಿ 2
ರಾಜಪುತ್ರರು ದಿವ್ಯ ವಾಜಿಗಳೇರುತ ಬಾಜಾರದೊಳು ವಿರಾಜಿಸಿ ನಡಿಯೆ3
ಮಂದಗಮನೆಯರ ರಥ ಮುಂದಾಗಿ ನಡೆದವುಇಂದಿರೆ ಅರಸನ ಸಂದಣಿ ನೋಡ 4
ಎಲ್ಲೆಲ್ಲಿ ನೋಡಿದರೆ ಪಲ್ಲಕ್ಕಿ ಸಾಲಾಗಿ ಫುಲ್ಲನಾಭನ ಮುಂದೆ ನಿಲ್ಲಿಸಿ ನಡಿಯೆ5
ನೋಡ ಬಂದವರೆಲ್ಲ ಗಾಡಿ ವಯಲುಗಳೇರಿರೂಢಿಗೊಡೆಯನ ಮುಂದೆ ಓಡಿಸಿ ನಡಿಯೆ 6
ತಂದೆ ರಾಮೇಶನು ಬಂದ ಬೀದಿಯ ಸೊಬಗುಇಂದಿರೆವಶವಲ್ಲ ಚಂದಾಗಿ ರಚಿಸೆ 7
****