Showing posts with label ಹೊರಡುತಾನೆ ಚೆನ್ನ ಕೃಷ್ಣ ಸುಮ್ಮನೆ purandara vittala. Show all posts
Showing posts with label ಹೊರಡುತಾನೆ ಚೆನ್ನ ಕೃಷ್ಣ ಸುಮ್ಮನೆ purandara vittala. Show all posts

Friday 6 December 2019

ಹೊರಡುತಾನೆ ಚೆನ್ನ ಕೃಷ್ಣ ಸುಮ್ಮನೆ purandara vittala

ರಾಗ ಪುನ್ನಾಗವರಾಳಿ ಆದಿ ತಾಳ

ಹೊರಡುತಾನೆ ಚೆನ್ನ ಕೃಷ್ಣ ಸುಮ್ಮನೆ || ಪ||

ಚಿಕ್ಕ ಮಗು ಎಂದು ನಾವು ಮುದ್ದಾಡಹೋದರೆ
ಸೊಕ್ಕುತಲೆ ಬಂದು ಎನ್ನ ಕಕ್ಕಸ ಕುಚಗಳ ಪಿಡಿದು
ಮಕ್ಕಳ್ಹುಟ್ಟುವರೆಂದು ಘಕ್ಕನೆ ರಟ್ಟೆಯ ಪಿಡಿದು
ಕಕ್ಕುಲತಿ ಮಾಡಿ ಪೋದ ಏನು ಮಾಡಲೆ ನಾನೇನು ಮಾಡಲೆ ||

ಅಂಗಳದೊಳಗೆ ನಾವು ಗೆಳತೆರೆಲ್ಲರು ಮಂಗಳಸ್ನಾನವ ಮಾಡಲು
ಸಂಗಡ ರಾಯರ ಕೂಡಿ ಬೊಗರಿಯಾಡುತ ಬಂದು
ಕಂಗಳನೆಲ್ಲನು ಮುಚ್ಚಿ ಭಂಡು ಮಾಡಿ ಓಡಿ ಪೋದ ||

ಎಷ್ಟು ನಿನಗೆ ಹೇಳಲೊ ರಂಗಯ್ಯ ರಂಗ
ದುಷ್ಟತನಗಳು ಭಾಳವೊ
ಸೃಷ್ಟಿಗೊಡೆಯನೆ ನಮ್ಮ ಪುರಂದರವಿಠಲನು
ದಿಟ್ಟತನದಲಿ ಬಲು ಅಟ್ಟುಳಿಯ ಮಾಡಿ ಪೋದ ||
***

pallavi

horaDutAne cenna krSNa summane

caraNam 1

cikka magu endu nAvu muddADa hOdare sokkutale bandu enna kakkasa piDidu
makkaLhuTTuvarendu ghakkane raTTeya piDidu kakkulati mADi pOda Enu mADale nAnEnu mADale

caraNam 2

angaLadoLage nAvu keLaderallaru mangaLa snAnava mADalu sankaTa
rAyara kUDi bogariyADuta bandu kangaLanellanu mucci bhaNDu mADi Odi pOda

caraNam 3

eSTu ninage hELalo rangayya ranga duSTatanagaLu bhALavo shrSTi
koDeyane namma purandara viTTalanu diTTatanadali balu aTTuLiya mADi pOda
***