Audio by Mrs. Nandini Sripad
ಶ್ರೀ ಕರ್ಜಗಿ ದಾಸಪ್ಪನವರ ಕೃತಿ ( ಶ್ರೀದವಿಠಲಾಂಕಿತ )
ರಾಗ ಭೌಳಿ ಖಂಡಛಾಪುತಾಳ
ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ।
ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ॥ ಪ ॥
ವರ ಶುಕ್ಲವತ್ಸರದ ಭಾದ್ರಪದ ಶಿತಪಕ್ಷ ।
ಹರಿವಾರ ನವಮಿಯಲ್ಲೀ ।
ಸುರಸಿದ್ಧಸಾಧ್ಯ ಸನ್ಮುನಿಗಣಾರ್ಚಿತ ಪಾದ ।
ಹರಿಯೆ ಪರನೆಂದೆನುತಲಿ ।
ಧರಣಿಯನು ತ್ಯಜಿಸಿ ಬಹುಮಾನ ಪೂರ್ವಕವಾಗಿ ।
ಬೆರೆದು ಸುರ ಸಂದಣಿಯಲಿ ॥
ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ।
ವರ ವಿಷ್ಣುದೂತ ವೈಮಾನಿಕರ ಒಡಗೂಡಿ ॥ 1 ॥
ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು ।
ಖತಿ ದೂರರಿವರು ಜಗದೀ ।
ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ ।
ಅತಿಶಯದಿ ಪೇಳಿ ಇಹಕೆ ।
ಸತತವು ಶರಣರ್ಗೆ ಗತಿಯಾಗುವಂತೆ ಸ - ।
ತ್ಪಥವಿಡಿಸಿ ಕರುಣದಿಂದ ॥
ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ ।
ಮತಿದೋರಿ ಕೊಟ್ಟು ಸದ್ಗತಿಗೋಸುಗವಾಗಿ ॥ 2 ॥
ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು ।
ಖೇಚರಾರೂಢ ಹರಿಯಾ ।
ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ ।
ವೈಚಿತ್ರವನ್ನು ತೋರಿ ।
ಈ ಚರಾಚರದಿ ಸಂಗೀತ ಸಾಹಿತ್ಯದಲ್ಲಿ ।
ಪ್ರಾಚುರ್ಯವಂತರೆನಿಸೀ ॥
ಆ ಚತುರ್ದಶಭುವನಪತಿ ಶ್ರೀದವಿಟ್ಠಲನ ।
ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ ॥ 3 ॥
**********
ಶ್ರೀ ಜಗನ್ನಾಥದಾಸಾರ್ಯರ ಮೇಲೆ ಶ್ರೀದವಿಠಲದಾಸರ ಕೃತಿ
ರಾಗ ಭೂಪಾಳಿ ಖಂಡಛಾಪುತಾಳ
ತೆರಳಿದರು ಶ್ರೀ ಜಗನ್ನಾಥದಾಸಾರ್ಯರು
ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ॥ ಪ ॥
ವರಶುಕ್ಲವತ್ಸರದ ಭಾದ್ರಪದ ಸಿತಪಕ್ಷ
ಹರಿವಾರ ನವಮಿಯಲ್ಲಿ
ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ
ಹರಿಯೆ ಪರನೆಂದೆನುತಲಿ
ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ
ಬೆರೆದು ಸುರಸಂದಣಿಯಲಿ
ಪರಮಾರ್ಥವೈದಿ ಮನ ಹರಿಯ ಪಾದದೊಳಿಟ್ಟು
ವರವಿಷ್ಣುದೂತ ವೈಮಾನಿಕರ ಒಡಗೂಡಿ ॥ 1 ॥
ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು
ಖತಿದೂರರಿವರು ಜಗದೀ
ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ
ಅತಿಶಯದಿ ಪೇಳಿ ಇಹಕೆ
ಸತತವು ಶರಣರ್ಗೆ ಗತಿಯಾಗುವಂತೆ ಸ -
ತ್ಕಥೆ ಪಿಡಿಸಿ ಕರುಣದಿಂದ
ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ
ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ ॥2॥
ಆಚರಣೆಯಲ್ಲಿ ಒಂದರಘಳಿಗೆ ಬಿಡದೆ ಬಲು
ಖೇಚರಾರೂಢ ಹರಿಯಾ
ಸೋಚಿತಾರಾಧನೆಯ ಮಾಡಿ ಮರೆಯದೆ ಮಹಾ
ವೈಚಿತ್ರ್ಯವನ್ನು ತೋರಿ
ಈ ಚರಾಚರದಿ ಸಂಗೀತ ಸಾಹಿತ್ಯದಲಿ
ಪ್ರಾಚುರ್ಯವಂತರೆನಿಸೀ
ಆ ಚತುರ್ದಶಭುವನಪತಿ ಶ್ರೀದವಿಠಲನ
ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ ॥3॥
https://drive.google.com/file/d/1Zo503EDCn-bNV3BxqYfW8qokZ2qEMOvc/view?usp=drivesdk
*********