ಕಾಖಂಡಕಿ ಶ್ರೀ ಕೃಷ್ಣದಾಸರು
ಮಾನವ ನಿನ್ನಾ | ಪಡೆದು ಕೊ ಸದ್ಗತಿಯನು ಪ
ತಡಿಯದೇ ಸದ್ಗುರು ಅಡಿಗಳ ಪೂಜಿಸಿ | ಒಡನೆ ಭವಾಂಭವಾಂಬುಧಿ ಥಡಿಯವ ಸಾರೆಲೋ ಅ.ಪ
ಪತ್ರೇಂದ್ರವಾಹನನು | ಮಣಿಗಣ ಸೂತ್ರದಂದದಿ ಜೀವನು | ಚಿತ್ರ ವಿಚಿತ್ರದಲಿ ಅಡಿಸುವ | ಗು | ಣತ್ರಯ ವಾದಲಿ | ಕಳತ್ರ ಸುಮಿತ್ರ ಸಮಂಧ | ಧತ್ರಿಲಿ ಮಾಯ ಚರಿತ್ರವಿದೆಂದು 1
ತಾನಾರು ತನುವಾರದು ತನುವಿನ | ತಾನೀ ಸಂಮಂಧವಾರದು | ಜ್ಞಾನಿಗಳನು ಮತದಿ ತಿಳಿದು ನೋಡು | ಸ್ವಾನುಭವದ ಬೋಧದೀ | ಹಾನಿ ಯಶ _ ಸುಖ ಮಾನಾಪಮಾನವು | ಮಾನವರಿಗೆ ಪ್ರಾಚೀನ ಫಲೆಂದು 2
ಹಿಂದಾದ ನೆನಹಿಸದೇ ವಾಸನೆಗಳ | ಮುಂದೇನು ಕಾಮಿಸದೇ | ಕ | ನಸಿನಾನಂದ ವಿದೆಂದು ಭಾವಿಸೀ | ತಂದೆ ಮಹಿಪತಿ ಕಂದಗ ಸಾರಿದ | ದ್ವಂದ್ವಗೆಲಿದು ಗೋವಿಂದ ನೆನೆಯುತ 3
***