RSS song .
ಭಾರತದ ಅಸ್ಮಿತೆಗೆ ಎರಗಿಹ ಸವಾಲುಗಳ
ಸ್ವೀಕರಿಸ ಬನ್ನಿರೋ ತರುಣ ಜನರೆ |
ಹೆಮ್ಮೆಯಿಂದೆದೆಯೆತ್ತಿ ನಮ್ಮದೀ ನೆಲವೆಂದು
ಜಗಕೆ ಸಾರುವ ಬನ್ನಿ ಹಿಂದು ಜನರೆ ||ಪ||
ಮೇದಿನಿಯು ಮುಳುಗಿರಲು ಗಾಢಾಂದಕಾರದಲಿ
ಜ್ಞಾನಜ್ಯೋತಿಯ ಬೆಳೆಗಿದಂಥ ನೆಲವು |
ಪರಕೀಯ ತತ್ವಗಳ ಅಂಧಾನುಕರಣೆಯಲಿ
ಮೈಮರೆತು ಮಲಗಿದರೆ ಏನು ಫಲವು? ||೧||
ಜಾತಿಮತಭೇದಗಳ ಬೇಲಿಗಳ ಕಿತ್ತೆಸೆದು
ಏಕಪುರುಷನ ತೆರದಿ ಎದ್ದು ನಿಂದು |
ಭಿನ್ನತೆಯ ಬದಿಗಿರಿಸಿ ತನ್ನತವನು ಮೆರೆಸಿ
ಹೊನ್ನಿನಂತಹ ನಾಡ ಕಟ್ಟಿರಿಂದು ||೨||
ಗುಪ್ತಗಾಮಿನಿಯಂತೆ ನಾಡ ನಾಡಿಗಳಲ್ಲಿ
ಸುಪ್ತವಾಗಿರ್ಪ ಛಲ ಸ್ವಾಭಿಮಾನ |
ಪ್ರಕಟಗೊಳ್ಳಲಿ ಇಂದು ಪ್ರವಹಿಸಲಿ ಭೋರ್ಗರೆದು
ಮರಳಿ ಗಳಿಸಲು ಪ್ರಥಮ ಸ್ಥಾನಮಾನ ||೩||
ಗಾದಿ ಏರಿದ ಜನರ ಹಾದಿ ತಪ್ಪಿದ ಹುಸಿಯ
ವಾದಗಳ ಸೋಗನ್ನು ಛಿದ್ರಗೊಳಿಸಿ |
ಜಟಿಲತೆಯ ಜಾಲಗಳ ಕುಟಿಲತೆಯ ವ್ಯೂಹಗಳ
ಛೇದಿಸುತ ರಾಷ್ಟ್ರವನು ಭದ್ರಗೊಳಿಸಿ ||೪||
ನಿಲ್ಲಿದಿರಿ ಒಂದು ಕ್ಷಣ ಸಲ್ಲದಿದು ಹೇಡಿತನ
ಗೆಲ್ಲುವುದೆ ಗುರಿಯೆಮದು ಕಟ್ಟಕಡೆಗೆ |
ಸಜ್ಜುಗೊಳಿಸಿರಿ ಪಡೆಯ ಕ್ಷಿಪ್ರಗೊಳಿಸಿರಿ ನಡೆಯ
ವಿಶ್ವಮಂಗಲ್ಯದಾ ಧ್ಯೇಯದೆಡೆಗೆ ||೫||
***
BAratada asmitege eragiha savAlugaLa
svIkarisa bannirO taruNa janare |
hemmeyiMdedeyetti nammadI nelaveMdu
jagake saaruva banni hiMdu janare ||pa||
mEdiniyu muLugiralu gADhAMdakAradali
j~jAnajyOtiya beLegidaMtha nelavu |
parakIya tatvagaLa aMdhAnukaraNeyali
maimaretu malagidare Enu Palavu? ||1||
jAtimataBEdagaLa bEligaLa kittesedu
EkapuruShana teradi eddu niMdu |
Binnateya badigirisi tannatavanu meresi
honninaMtaha nADa kaTTiriMdu ||2||
guptagAminiyaMte nADa nADigaLalli
suptavAgirpa Cala svABimAna |
prakaTagoLLali iMdu pravahisali BOrgaredu
maraLi gaLisalu prathama sthAnamAna ||3||
gAdi Erida janara hAdi tappida husiya
vAdagaLa sOgannu CidragoLisi |
jaTilateya jAlagaLa kuTilateya vyUhagaLa
CEdisuta rAShTravanu BadragoLisi ||4||
nillidiri oMdu kShaNa salladidu hEDitana
gelluvude guriyemadu kaTTakaDege |
sajjugoLisiri paDeya kShipragoLisiri naDeya
viSvamaMgalyadA dhyEyadeDege ||5||
***