Showing posts with label ಪಾರ್ಥಸಖನ ನೀ ಪ್ರಾರ್ಥನೆ ಮಾಡಿಕೃ ತಾರ್ಥನಾಗೋ ಮನುಜಾ gurujagannatha vittala. Show all posts
Showing posts with label ಪಾರ್ಥಸಖನ ನೀ ಪ್ರಾರ್ಥನೆ ಮಾಡಿಕೃ ತಾರ್ಥನಾಗೋ ಮನುಜಾ gurujagannatha vittala. Show all posts

Wednesday, 1 September 2021

ಪಾರ್ಥಸಖನ ನೀ ಪ್ರಾರ್ಥನೆ ಮಾಡಿಕೃ ತಾರ್ಥನಾಗೋ ಮನುಜಾ ankita gurujagannatha vittala

ಪಾರ್ಥಸಖನ ನೀ ಪ್ರಾರ್ಥನೆ ಮಾಡಿಕೃ -

ತಾರ್ಥನಾಗೋ ಮನುಜಾ ಪ

ಸಾರ್ಥಕವಾಗದ ವಾರ್ತೆಯ ಕೇಳಲು

ಆರ್ತಿಯು ಒಪ್ಪುದೊ ನಿಜಾ ಅ.ಪ

ಏಕಾಂತದಿ ಶ್ರೀಕಾಂತನ ಭಜಿಸಲು

ಲೋಕಾಂತರ ಸುಖಪ್ರಾಪ್ತಿ

ಭೂಕಾಂತನ ಭಜಿಸಲು ಮಾಕಾಂತನು ಒಲಿಯನು

ಲೋಕಾಂತರ ನಿರಯಾಪ್ತಿ 1

ಶಿರಿರಮಣನ ಪದಯುಗಳವ ಭಜಿಸಲು

ದೊರೆವೋದೀಗ ಮೋಕ್ಷ

ನರಜನ ಗುಣಗಳ ವರಣನೆ ಮಾಡಲು

ನಿರಯ ದುಃಖ ಪತ್ಯಕ್ಷ 2

ವೀತ ದೋಷ ನಿರ್ಭೀತ ಗುರುಜಗ

ನ್ನಾಥ ವಿಠಲರೇಯ

ಮಾತು ಕೇಳೆ ನಿಜ ಮಾತೆಯ ತೆರದಲಿ

ದೂತನು ಪಿಡಿವನು ಕೈಯ್ಯಾ 3

***