Showing posts with label ಬಂದೆ ನಾ ನಿಂದೆ ಇಂದೇ ವಂದಿಸಿದೆನೊ ವಂದೆ vijaya vittala. Show all posts
Showing posts with label ಬಂದೆ ನಾ ನಿಂದೆ ಇಂದೇ ವಂದಿಸಿದೆನೊ ವಂದೆ vijaya vittala. Show all posts

Thursday, 17 October 2019

ಬಂದೆ ನಾ ನಿಂದೆ ಇಂದೇ ವಂದಿಸಿದೆನೊ ವಂದೆ ankita vijaya vittala

ವಿಜಯದಾಸ
ಬಂದೆ ನಾ ನಿಂದೆ ಇಂದೇ | ವಂದಿಸಿದೆನೊ ವಂದೆ |
ಮಾಧವ ತಂದೆ | ಆನಂದ ಇಂದಿರೇಶ ಬಂದೆ ಪ

ಪುರುಹೂತ ಜಾತ ಸೂತ | ಸರಸಿಜ ತಾತಾ |
ಪರಮ ಪುರುಷ ಖ್ಯಾತ | ಸರವಂದ್ಯ ದೈತ್ಯ ಘಾತಾ | ಹಾಹಾ
ಚರಣವ ನಿರುತರ ನೆರೆನಂಬಿದೆ | ದು
ಸ್ತರ ಭವಶರಧಿ ಉತ್ತರಿಸೊ ಉರಗಶಾಯಿ 1

ಮೂರ್ತಿ ವರದೇಶಾ
ಶರಣರ ಪರಿತೋಷಾ | ತರತಮ್ಯ ಜ್ಞಾನ ಕೋಶ | ಹಹ |
ಪುರಹರಗೀಕಾಶಿಪುರ ಕರುಣಿಸಿದ ಸುಂ |
ದರಗಾತುರ ಗೋತುರ ಧರ ಧರಣೀಶಾ 2

ಅವಿಮುಕ್ತಿ ಕ್ಷೇತ್ರವಾಸಾ | ನವನವ ಗುಣಭೂಷಾ |
ಅವಿಕಾರ ನಾನಾ ವೇಷಾ |
ರವಿಜವನ ಪೊರೆವ ಮಿರುವ ಮಹಸತ್ಕಥಾ
ಶ್ರವಣವೆ ಕೊಡು ಕೇಶವ ವಿಜಯವಿಠ್ಠಲಾ 3
*********