Showing posts with label ನೋಡಿದ್ಯಾ ನೋಡಿದ್ಯಾ ನೋಡಿದ್ಯಾ ಶ್ರೀ ಗುರುಗಳನ್ನು narasimha vittala. Show all posts
Showing posts with label ನೋಡಿದ್ಯಾ ನೋಡಿದ್ಯಾ ನೋಡಿದ್ಯಾ ಶ್ರೀ ಗುರುಗಳನ್ನು narasimha vittala. Show all posts

Saturday, 28 December 2019

ನೋಡಿದ್ಯಾ ನೋಡಿದ್ಯಾ ನೋಡಿದ್ಯಾ ಶ್ರೀ ಗುರುಗಳನ್ನು ankita narasimha vittala

ನೋಡಿದ್ಯಾ ನೋಡಿದ್ಯಾ ಪ

ನೋಡಿದ್ಯಾ ಶ್ರೀ ಗುರುಗಳನ್ನು | 
ಈ ಡಾಡಿ ಕೊಂಡಾಡಿದ್ಯಾ
ಆಹಾ ನೋಡಿ ಮನದಲ್ಲಿ ಕೊಂಡಾಡುತ್ತ ಗುರುಗಳ
ರೂಢಿವಳಗೆಲ್ಲ ಈಡಿಲ್ಲ ಯತಿಗಳ ಅ.ಪ

ನಿಂತರೆದುರಲ್ಲೆ ಮುಖ್ಯ ಪ್ರಾಣಾ | ಜಗ
ದಂತ ರೊಳಗೆಲ್ಲಿ ಅತಿ ಪ್ರಾಣಾ
ಅಂತರಂಗದಲ್ಲಿ ಶಾಂತ ಮೂರುತಿಗಳು
ಮಂತ್ರಾಲಯದಲ್ಲಿ ನಿಂತಿದ್ದ ಗುರುಗಳಾ 1

ಹೊದ್ದ ಕಾವೀಶಾಟಿಯಿಂದಾ ಶ್ರೀ
ಮುದ್ರೆ ಹಚ್ಚಿದ ದೇಹ ದಿಂದಾ
ಮಧ್ಯದಿ ಕೇಸರಿ ಗಂಧಾ | ಬಲು
ಮುದ್ದು ಸುರಿವನಾಮದಿಂದಾ
ತಿದ್ದಿದ ಅಂಗಾರ ಮುದ್ರೆಯೊಳಕ್ಷತೆ
ಎದ್ದು ಬರೂವಂಥ ಮುದ್ದು ಗುರೂಗಳಾ 2

ಮುದ್ದು ಬೃಂದಾವನದ ಮಾಟಾ
ಅಲ್ಲಿದ್ದು ಜನರ ಓರೆನೋಟಾ
ಪ್ರಸಿದ್ದ ರಾಯರ ಪೂರ್ಣನೋಟ
ನಮ್ಮಲ್ಲಿದ್ದ ಪಾಪಗಳೆಲ್ಲ ಓಟ
ಹದ್ದು ವಾಹನ ನರಸಿಂಹ ವಿಠಲಾ | ಅ
ಲ್ಲಿದ್ದು ವರವ ಕೊಡುವ ಗೋಪಾಲಕೃಷ್ಣನ್ನಾ 3
***********