Showing posts with label ಸ್ಥಾಣುಮಹೇಶ್ವರ ತ್ರಿನಯನ govinda. Show all posts
Showing posts with label ಸ್ಥಾಣುಮಹೇಶ್ವರ ತ್ರಿನಯನ govinda. Show all posts

Monday, 18 November 2019

ಸ್ಥಾಣುಮಹೇಶ್ವರ ತ್ರಿನಯನ ankita govinda

by ಗೋವಿಂದದಾಸ
ಸ್ಥಾಣುಮಹೇಶ್ವರ ತ್ರಿನಯನ ||ಶಂಕರ||ಮಾಣದೆಸಲಹೋ ರುದ್ರಾಣಿ ಮನೋಹರ ಪ

ಪೂರ್ಣ ಕೃಪೆಯೊಳ್ ನಿನ್ನ | ಶರಣನೆಂದೆನಿಸೆನ್ನ ಅಬಾಣನಿಗೊಲಿದಾತಣ್ಗದಿರನಿಶೇಖರ |ಭೂತನಾಥನೆಭವ| ಭೀತಿವಿನಾಶನೆ |ಪಾತಕಹರಸುರ | ವ್ರಾತಾನಮಿತನೆ ಚಭೂತಳದೊಳಗೆ ಸರ್ವಾರ್ಥರಕ್ಷಕನೆಂದು |ಖ್ಯಾತಿಯ ತಳೆದ ಕಾತ್ಯಾಯನಿ ರಮಣಾ 1

ರುದ್ರಚಮಕಗಳಿಂದ | ಲಭಿಷೇಕವಗೈದು |ಶ್ರದ್ಧೆಯೊಳರ್ಚಿಸಲಾರೇ | ಪತ್ರೆಯ ಕೊಯ್ದು |ರುದ್ರಾಕ್ಷಿಯು ಭಸ್ಮಲೇಪನ ಧರಿಸುತ |ಪ್ರದೋಷದ ವ್ರತವರಿಯೆನ್ನುದ್ಧರಿಸೊ 2

ಸುಗುಣಶರಧಿಲಿಂಗ | ಪೂಜೆ ವಿನೋದಿತ |ಮೃಗದ ನೆವದಿ ಪಾರ್ಥಗೊಲಿದಕೈರಾತ|ಜಗದೀಶ್ವರನೆ ಗೋವಿಂದನಸಖನಿನ್ನ |ಮೊಗವ ತೋರಿಸುದಾಸಗೊಲಿದು ನೀ ದಯದಿ 3
*******