Showing posts with label ದುರ್ಗೇ ಪಾಲಿಸೆ ಹೇ ದುರ್ಗೇ ಪಾಲಿಸೆ karpara narahari DURGE PAALISE HE DURGE PAALISE BHAARGAVI. Show all posts
Showing posts with label ದುರ್ಗೇ ಪಾಲಿಸೆ ಹೇ ದುರ್ಗೇ ಪಾಲಿಸೆ karpara narahari DURGE PAALISE HE DURGE PAALISE BHAARGAVI. Show all posts

Friday, 5 November 2021

ದುರ್ಗೇ ಪಾಲಿಸೆ ಹೇ ದುರ್ಗೇ ಪಾಲಿಸೆ ankita karpara narahari DURGE PAALISE HE DURGE PAALISE BHAARGAVI

ದುರ್ಗೇ ಪಾಲಿಸೆ ಹೇ ದುರ್ಗೇ ಪಾಲಿಸೆ ಪ

ಭಾರ್ಗವಿ ಭಜಕರ ವರ್ಗವ ಕರುಣದಿ ಅ.ಪ

ಸರ್ಗಸ್ಥಿತಿ ಲಯಕಾರಣೆ ಜಗಕೆ ಸು

ಮಾರ್ಗದಿ ನಡೆಯಲನುಗ್ರಹ ಮಾಡೆ 1

ವಂದಿಸುವೆನು ಭವಬಂಧವ ಬಿಡಿಸ್ಯಾ

ನಂದವ ಕರುಣಿಸು ನಂದಾತ್ಮಜಳೆ 2

ಕಡಲತನುಜೆ ತವಕಡು ಕರುಣದಲಿ

ಬಡಜಭವ ಮುಖರು ಪಡೆದರು ಪದವನು 3

ಧಾರುಣೆ ನಭ ಸಂಚಾರಿಣೆ ಆಯುಧ

ಧಾರಿಣಿ ಭವ ಭಯಹಾರಿಣಿ ನಮೊನಮೋ4

ಇಂದಿರೆ ಪದುಮ ಸುಮಂದಿರೆ ತವಪದ

ದ್ವಂದ್ವದಿ ಭಕುತಿಯ ಪೊಂದಿ ಸುಖಿಸುವಂತೆ 5

ವೀರರೂಪಿ ಅಸುರಾರಿಯೆ ತವಪರಿ

ವಾರದ ಭಯವನು ತಾರದಿರೆಂದಿಗೂ 6

ಮಂಗಳಕೃಷ್ಣ ತರಂಗಿಣೆ ಕಾರ್ಪರ

ತುಂಗಮಹಿಮೆ ನರಸಿಂಗನ ರಾಣಿ7

****