ಶ್ರೀ ಗುರುಜಯವಿಠಲ ದಾಸರ ಕೃತಿ
ರಾಗ ಮುಖಾರಿ ಆದಿತಾಳ
ಮಂಗಳಮಸ್ತು ಶ್ರೀಗೌರಿ । ಪರಮೇಶ್ವರಿ ಗಿರಿಜಾ ॥ ಪ ॥
ಘೋರದುರಿತ ವಿದೂರೆ ಜಗ - ।
ದಾಧಾರೆ ನಿಗಮವಿಹಾರೇ ॥
ಶಂಕರಧಾರೇ ಸದ್ಗುಣಧಾರೇ ।
ದೈತ್ಯವಿದಾರೆ ಭಕ್ತೋದ್ಧಾರೆ ॥ 1 ॥
ಶ್ರೀಮಹಾಬಲಧಾಮೆ ಸುಜನ ।
ಸ್ತೋಮವಂದಿತೆ ಕೋಮಲಾಂಗಿಯೇ ॥
ಸೋಮಸನ್ಮುಖಿ ಸೋಮಧರಸಖಿ ।
ಕಾಮಿತಾರ್ಥದೇ ತಾಮರಸಪಾದೆ ॥ 2 ॥
ಭೂರಿಘನ ಕರುಣಾರಸಾನ್ವಿತೆ ।
ಸಾರಹೃದಯೆ ಸರೋರುಹೇಕ್ಷಣೆ ॥
ಧೀರೆ ಪರಮೋದಾರೆ ಶರಧಿಗಂಭೀರೆ ।
ಗುರುಜಯವಿಠ್ಠಲ ಸೋದರಿ ॥ 3 ॥
*********
ಜಯವಿಠಲ ದಾಸರು (ನಂಜನಗೂಡು ಶ್ರೀನಿವಾಸದಾಸರು )
ಇವರದ್ದು ಸುಮಾರು 20 ಕೃತಿಗಳು ಸಿಕ್ಕಿವೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ.