Showing posts with label ವರದೇಂದ್ರ ತೀರ್ಥರ ಪದಧ್ಯಾನ karpara narahari varadendra teertha stutih. Show all posts
Showing posts with label ವರದೇಂದ್ರ ತೀರ್ಥರ ಪದಧ್ಯಾನ karpara narahari varadendra teertha stutih. Show all posts

Monday, 2 August 2021

ವರದೇಂದ್ರ ತೀರ್ಥರ ಪದಧ್ಯಾನ ankita karpara narahari varadendra teertha stutih

ವರದೇಂದ್ರ ತೀರ್ಥರ ಪದಧ್ಯಾನ,

ಮುಕ್ತಿಮಾರ್ಗಕೆ ಸೋಪಾನ ಪ

ಗುರುವಸುಧೇಂದ್ರರ ಕರ ಕಮಲಜ ತವ ಚರಣಯುಗಲ

ಪರಿಶೇವನಾ 1

ಪರಮತ ತಿಮಿರ ಭಾಸ್ಕರನೆಂಬುವ ತವ

ಬಿರುದಾವಳಿ ಸಂಕೀರ್ತನಾ 2

ಕ್ಷೋಣಿಸುರರಿಗೆ ದ್ರವ್ಯ ದಾನದಿಂದಲಿ ಜಿತ

ಭಾನುಜರೆಂಬುವ ಭಾಷಣ 3

ಹರುಷತೀರ್ಥರ ಮತ ಶರಧಿಗೆ ಪೂರ್ಣ

ಚಂದಿರನೆಂಬುವ ಶುಭಗಾಯನ 4

ಶರಣರ ಪೊರಿವ 'ಕಾರ್ಪರನರಸಿಂಹ'ನ

ಕರುಣ ಪಾತ್ರ ತವಶೇವನಾ 5

****