Showing posts with label ವೆಂಕಟಾಚಲ ನಿವಾಸ ಸಲಹಯ್ಯ varaha timmappa. Show all posts
Showing posts with label ವೆಂಕಟಾಚಲ ನಿವಾಸ ಸಲಹಯ್ಯ varaha timmappa. Show all posts

Friday, 27 December 2019

ವೆಂಕಟಾಚಲ ನಿವಾಸ ಸಲಹಯ್ಯ ankita varaha timmappa

by ನೆಕ್ಕರ ಕೃಷ್ಣದಾಸರು
ಮಧ್ಯಮಾವತಿ ರಾಗ ಝಂಪೆತಾಳ

ವೇಂಕಟಾಚಲನಿವಾಸ ಸಲಹಯ್ಯ
ಪಂಕಜಾಕ್ಷನೆ ಶ್ರೀನಿವಾಸ ||ಪ||

ವಾರಿಯೊಳು ಮುಳುಗಾಡಿದೆ, ಮಂದರದ
ಮೇರು ಬೆನ್ನೊಳು ತಾಳಿದೆ
ಕಾರಡವಿಯೊಳು ಚರಿಸಿದೆ, ಕಂಬದೊಳು
ಘೋರ ರೂಪವ ತೋರಿದೆ||೧||

ವಟುವಾಗಿ ಧರೆಯನಳೆದೆ, ಕೊಡಲಿಯೊಳು
ಪಟುತರದ ನೃಪರ ಗೆಲಿದೆ
ಅಟವಿವಾಸವ ಮಾಡಿದೆ, ರಣದೊಳಗೆ
ಚಟುಳ ವಾಜಿಯ ನಡೆಸಿದೆ ||೨||

ಅಂಗದಂಬರವ ಮರೆದೆ, ಕಡೆಯೊಳು, ತು-
ರಂಗದೊಳು ಏರಿ ನಲಿದೆ
ಬಂಗಾರದದ್ರಿಯೊಳು ಮೆರೆದೆ , ವರಾಹ
ರಂಗತಿಮ್ಮಪ್ಪ ಒಲಿದೆ ||೩||
******