ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಮಂಗಳ ಮುನಿಜನ ಪಾಲ ಜಯ ಜಯ ಸ್ವಾಮಿ ಸದ್ಗುರು ಕೃಪಾಲ ಪ
ತೇಜ:ಪುಂಜವು ನಿಮ್ಮ ಘನಸುಖಸಾಂಧ್ರ ರಾಜ ತೇಜೋನಿಧಿ ರಾಜ ರಾಜೇಂದ್ರ ಸುಜನರ ಹೃದಯ ಸುಜ್ಞಾನ ಸಮುದ್ರ ಅಜಸುರವಂದ್ಯ ಶ್ರೀ ದೇವದೇವೇಂದ್ರ 1
ಪತಿತ ಪಾವನ ಪೂರ್ಣ ಅತಿಶಯಾನಂದ ಯತಿ ಮುನಿಗಳಿಗೆ ನೀ ದೋರುವೆ ಚಂದ ಪಿತಾಮಹನ ಪಿತನಹುದೊ ಮುಕುಂದ ಸತತ ಸುಪಥದಾಯಕ ನೀ ಗೋವಿಂದ 2
ದೇಶಿಕರಿಗೆ ದೇವ ನಿಮ್ಮ ಸ್ವಭಾವ ಋಷಿ ಮುನಿಗಳಿಗೆ ನೀ ಜೀವಕೆ ಜೀವ ದಾಸ ಮಹಿಪತಿಗೇನಹುದೊ ಮನದೈವ ವಾಸುದೇವ 3
****