ಕೊಳ್ಳೆಗಾರ ನಿನ್ನ ಕಂದ , ಗೋಪಿ ,ಗೋಪಾಲಕೃಷ್ಣ ಮುಕುಂದ ||ಪ||
ಉಳ್ಳ ಬೆಣ್ಣೆಯನೆಲ್ಲ ತಿಂದ ಬಹು ಕ್ಷುಲ್ಲಕನಲ್ಲೆ ಗೋವಿಂದ
ಗುಲ್ಲು ಮಾಡದೆ ರಾತ್ರಿ ಬಂದ ನಮ್ಮ ಎಲ್ಲ ಮಾನವ ಸೂರೆಗೊಂಡ
ಬಲು ಭಂಡ ಬಲು ಭಂಡ ಉದ್ದಂಡ ಪ್ರಚಂಡ
ರುಕ್ಮಿಣಿಗಂಡ ಅಂಡಜವಾಹನ ಪುಂಡರೀಕಾಕ್ಷನು ||
ಚಿಕ್ಕಮಕ್ಕಳ ಬೆದರಿಸಿ ಮನೆ ಹೊಕ್ಕು ನಮ್ಮ ಹೊರಡಿಸಿ
ಅಕ್ಕ ಹಾಲು ಗಡಿಗೆ ಇಳಿಸಿ ಕುಡಿದು ಸಿಕ್ಕದೆ ಓಡುವ ಸರಸಿ
ಅವನು ತ್ರಾಣಿ ಅವನು ತ್ರಾಣಿ ಅವರಾಣೆ ಇವರಾಣೆ
ಕಣ್ಣಾಣೆ ಕಾಣೆ ಚೋರನು ಸಿಕ್ಕ ಜಾಣೆ ||
ದೊರೆಯ ಮಗನಾದರೇನು ಈ ಧರೆಯ ತಾನಾಳಿದರೇನು
ಮೊರೆಯ ಕೇಳು ಗೋಪಮ್ಮ ನಮ್ಮ ಸರಸವಾಡಿ ಪೋದನಮ್ಮ
ಊರಿಲ್ಲಾ ಊರಿಲ್ಲಾ ದಿಕ್ಕಿಲ್ಲಾ ನಾವೆಲ್ಲಾ ನಿಲ್ಲುವರಲ್ಲಾ
ಪುರಂದರವಿಠಲನ ದುಡುಕು ಒಂದೊಂದಲ್ಲಾ ||
***
ರಾಗ ಪೀಲು ಅಟತಾಳ (raga tala may differ in audio)
pallavi
koLLEgAra ninna kanda gOpi gOpAlakrSNa mukunda
caraNam 1
uLLa beNNeyanella tinda bahu kSullaganalla gOvinda gullu mADade
rAtri banda namma ella mAnava suregoNDa balu bhaNDa balu bhaNDa
uddaNDa pracaNDa rukmiNi gaNDa aNdaja vAhana puNdarIkAkSanu
caraNam 2
cikka makkaLa bedarisi mane hokku namma horaDisi akka hAlu
gaDige iLisi kuDidu sikkade Oduva sarasi avanu trANe avanu trANe
ninnANe avarANe ivarANe kaNNAne kANe cOranu sikka jANe
caraNam 3
toreya maganAdarEnu I dhareya tAnALidarEnu moreya kELu
gOpamma namma sarasavADi pOdanamma UrillA UrillA dikkillA
nAvellA nilluvarallA purandara viTTalana duDuku ondondalla
***