ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಹರಿ ತಾರಿಸೆನ್ನ ಸಹಕಾರಿ | ದಯಬೀರಿ | ಸಿರಿ ಮನೋಹಾರಿ | ಶೌರಿ | ನರಹರಿ ಮರೆಯದೆ ಹೊರಿ ಮನ ಹರಿವಾರು | ಪರಿ ಪರಿ 1
ಸ್ಪುರಿತಾ ಚಕ್ರಗೋಗದಾಬ್ಜ ಭರಿತಾ | ಯುಧನಿರುತಾ | ಶೋಭಿತಾ | ನಿರ್ಜರ ಸರಿತಾ | ಗುರುತದನವರತ ದಲರಿತರ ದುರಿತಪ | ಹರಿ ಚಿದಾನಂದ ಭರಿತ ಸುಚರಿತಾ 2
ಸನ್ನುತ ಮಹಿಪತಿ | ಅಣುಗನೊಡಿಯಾ ಫಣಿವರ ಶಾಯೀ | ಎಣೆಗಾಣದಗಣಿತ | ಗುಣಗಣ ಮಣಿಖಣಿ | ಅಣುರೇಣು ತೃಣಕಣ ವ್ಯಾಪಕ ಪೂರಣ 3
***