Showing posts with label ಜಯ ಜಯತು ಶ್ರೀರಾಮ ಜಯಜಯತು ಘನಶ್ಯಾಮ lakshmikanta. Show all posts
Showing posts with label ಜಯ ಜಯತು ಶ್ರೀರಾಮ ಜಯಜಯತು ಘನಶ್ಯಾಮ lakshmikanta. Show all posts

Sunday, 1 August 2021

ಜಯ ಜಯತು ಶ್ರೀರಾಮ ಜಯಜಯತು ಘನಶ್ಯಾಮ ankita lakshmikanta

..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಜಯಜಯತು ಶ್ರೀರಾಮ ಜಯಜಯತು ಘನಶ್ಯಾಮ

ಜಯಜಯತು ಮುನಿಪ್ರೇಮ - ರಿಪು ಭೀಮ

ಜಯಜಯತು ಸುರಸ್ತೋಮ - ವಿನಮಿತ ಮಂಗಳ ನಾಮ

ಜಯತು ಸದ್ಗುಣಧಾಮ - ರಘುರಾಮ 1


ಆನಂದ ಜ್ಞಾನದನೆ - ಆನಂದ ಮಾಸದನೆ

ಆನಂದ ಸಿದ್ಧಿದನೆ - ಅನಘನೇ

ಆನಂದ ಮಂದಿರನೆ - ಆನಂದ ಚಂದಿರನೆ

ಆನಂದ ಸುಂದರನೆ - ಅಘಹಾನೇ 2


ಸುರಾರಿದರ್ಪಹರ - ಪುರಾರಿ ಮಿತ್ರವರ

ದರಾರಿ ಅಭಯಕರ-ಸುಕುಮಾರ

ಕಾರುಣ್ಯಪಾಂಗವರ-ಲಾವಣ್ಯರೂಪಧರ

ವರೇಣ್ಯನಿಕರ - ಸಿರಿಕಾಂತ 3

***