Showing posts with label ಕಂಡಿರೇನೇ ರಂಗನಾ ನಿಮ್ಮ ಮನೆಗಳಲ್ಲಿ ಕಂಡರೆ ಹೇಳಿರಮ್ಮಾ gurumahipati. Show all posts
Showing posts with label ಕಂಡಿರೇನೇ ರಂಗನಾ ನಿಮ್ಮ ಮನೆಗಳಲ್ಲಿ ಕಂಡರೆ ಹೇಳಿರಮ್ಮಾ gurumahipati. Show all posts

Wednesday, 1 September 2021

ಕಂಡಿರೇನೇ ರಂಗನಾ ನಿಮ್ಮ ಮನೆಗಳಲ್ಲಿ ಕಂಡರೆ ಹೇಳಿರಮ್ಮಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಕಂಡಿರೇನೇ ರಂಗನಾ ನಿಮ್ಮ ಮನೆಗಳಲ್ಲಿ ಕಂಡರೆ ಹೇಳಿರಮ್ಮಾ ಒಂದು ಮಾತಿನಲಿ ಬೆಂಡಾದೆನೇ ಅರಸುತ ನಾನಾದಾರಿಗಳಲ್ಲಿ ಪುಂಡರೀಕಾಕ್ಷನು ದೋರನು ಎಲ್ಲಿ ಮಣಿ ಕುಂಡಲ ಮಂಡಿತ ಗಂಡ ಕಪೊಲ ಪ್ರಚಂಡನ ಲೀಲೆ 1 

ಒಮ್ಮೆ ಭಾವಿಕ ಗೋವಳರಾ ಆಟ ಪಾಟದಲಿರುವಾ ಒಮ್ಮೇ ಕಾಮುಖ ಗೊಲ್ಲತೇರಾ ಚಿತ್ತಕಾನಂದ ನೀವಾ ಒಮ್ಮೆ ಯಜ್ಞ ಪತ್ನಿಯರಾ ಸವಿಯಾಟ ಕವಲಿವಾ ಅಮ್ಮ ಒಂದೇ ಠಾರ್ವೆನೇ ಹೇಳುವಾ ಅವ ನಿಮ್ಮವನೇ ತಮ್ಮನೇ ಸುಮ್ಮನೇ ತಿರುಗುತ ಘಮ್ಮನೇ ಝುಮ್ಮನೇ ಹೊಳೆವಾ 2 

ಪುಲ್ಲ ನಾಭನ ಕಾಣದಿರೇ ಕಣ್ಣು ಕುರುಡವು ನಮ್ಮ ಸೊಲ್ಲ ವಾಲಿಸದಿಹ ಹರಿಯಾ ಕಿವಿಬಧಿರವು ನಮ್ಮ ಅಲ್ಲಿ ಮನುಜ ಮಹಿಪತಿಸುತ ಪ್ರಭು ಪರಬೊಮ್ಮ ನಿಲದಪ್ಪಿ ಕೊಳಲು ಸಂಭ್ರಮಾ ಅವನೆಲ್ಲೆಲ್ಲ ನೋಡಲು ಅಲ್ಲಲ್ಲಿ ನಿಂದಿಹ ಇಲ್ಲದ ಸ್ಥಳವಿಲ್ಲವಮ್ಮಾ 3

****