ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆನು ಕೌತುಕವ ಏನೆಂದ್ಹೇಳಲಿ ಸೋಜಿಗವ p
ಅಜ ನುಂಗಿತು ಗಜನ ವಾಜಿ ನುಂಗಿತು ಈ ಮೂಜಗವ ಸಂಜೀವ ಸಂಜೀವ 1
ಇಲಿಯು ನುಂಗಿತು ಮೊಲವ ಹಲ್ಲಿ ನುಂಗಿತು ಹಲವು ಕುಲವ ಜಲ ನುಂಗಿತು ಜಲವ ಹುಲಿ ನುಂಗಿತು ಈ ಮಾರ್ಜಲವ 2
ನೊರಜು ನುಂಗಿತು ಗಿರಿ ಪರ್ವತವಇರಹು ನುಂಗಿತು ಸರ್ವ ಬೆರಗಾಯಿತು ಮಹಿಪತಿ ಜೀವ 3
***