Showing posts with label ತೋರವ್ವಾ ಗೆಳತಿ ಶ್ರೀರಂಗನ ಭವಭಂಗನಾ ತೋರೆ ಕೋಮಲಾಂಗನಾ gurumahipati. Show all posts
Showing posts with label ತೋರವ್ವಾ ಗೆಳತಿ ಶ್ರೀರಂಗನ ಭವಭಂಗನಾ ತೋರೆ ಕೋಮಲಾಂಗನಾ gurumahipati. Show all posts

Wednesday, 1 September 2021

ತೋರವ್ವಾ ಗೆಳತಿ ಶ್ರೀರಂಗನ ಭವಭಂಗನಾ ತೋರೆ ಕೋಮಲಾಂಗನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ತೋರವ್ವಾ ಗೆಳತಿ ಶ್ರೀರಂಗನ ಭವಭಂಗನಾ| ತೋರೆ ಕೋಮಲಾಂಗನಾ ಪ 


ಅನಾದಿ ಬಾಂದವನೆನುತಲಿ|ಶೃತಿ ಹೊಗಳಲಿ| ಶರಣನೀಗ ಬಂದಾ| ಶ್ರೀನಿಧಿ ತುಷ್ಟನು ಭಕ್ತಿಲಿ|ಯಂದು ಕೇಳಲಿ| ಮುಂದ ಗಾಣದೆ ನಿಂದಾ1 

ಜಗಂಗದಂತರ್ಯಾಮಿಯನಿಸುವ|ಮನೆಮುರಿಲಿಹ| ಕಂಗಳಿಗೆ ದೋರನಮ್ಮಾ| ಮುಗಧಿಯೊಡನೆ ಠಕ್ಕವಳಿಯಾ|ದೋರುವರೇಕೈಯ್ಯಾ| ಬಿರುದಿಗೆ ಛಂದೇನಮ್ಮಾ2 

ಹಂಬಲಿಸುತ ಕಾವನೆನೆಯಲುಛಂದಾ|ಸ್ವಾನುಭಾವದಿಂದ| ಡಿಂಬಿನೊಳು ಒಡಮೂಡಿ| ನಂಬಿದವರ ಕಾವಾ ಮಹಿಪತಿ ಸುತಸಾರಥಿ| ಕೊಟ್ಟನಿಂಬವ ಕೂಡೀ3

***